ಕೊಲಂಬೋ: ಸೂಪರ್ 8ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಆತಿಥೇಯ ಶ್ರೀಲಂಕಾ(Sri Lanka) ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಭರ್ಜರಿ 61 ರನ್‌ಗಳಿಂದ ಗೆದ್ದ ನ್ಯೂಜಿಲೆಂಡಿನ(New Zealand) ಸೆಮಿ ಆಸೆ ಜೀವಂತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 168 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 107 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
ಹಾಗೆ ನೋಡಿದರೆ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 84 ರನ್‌ಗಳಿಸಿದ್ದಾಗ ಪಂದ್ಯ ಶ್ರೀಲಂಕಾದ ಕಡೆಯೇ ಇತ್ತು. ಯಾವಾಗ ನಾಯಕ ಮಿಚೆಲ್ ಸ್ಯಾಂಟ್ನರ್ (Mitchell Santner) ಬ್ಯಾಟ್ ಬೀಸಲು ಆರಂಭಿಸಿದರೋ ಪಂದ್ಯ ನ್ಯೂಜಿಲೆಂಡ್ ಕಡೆ ತಿರುಗಿತು.
ಸ್ಯಾಂಟ್ನರ್ ಮತ್ತು ಮೆಕ್‌ಕಾಂಚಿ 8ನೇ ವಿಕೆಟಿಗೆ 47 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿದ್ದು ನ್ಯೂಜಿಲೆಂಡ್‌ಗೆ ಬಲ ಬಂತು. ಸ್ಯಾಂಟ್ನರ್ 26 ಎಸೆತಗಳಲ್ಲಿ 47 ರನ್(2 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರೆ ಮೆಕ್‌ಕಾಂಚಿ ಔಟಾಗದೇ 31 ರನ್(23 ಎಸೆತ, 3 ಸಿಕ್ಸ್, 2 ಬೌಂಡರಿ) ಹೊಡೆದರು.
First time was so nice, he had to do it twice! 😉
Rachin Ravindra hits the repeat button and New Zealand tighten the screws on Sri Lanka 🔥
ICC Men’s #T20WorldCup | SUPER 8, #SLvNZ ➡️ LIVE NOW 👉 https://t.co/g4wqt4U8vL pic.twitter.com/o24RL6zNXg
— Star Sports (@StarSportsIndia) February 25, 2026
ಸ್ಯಾಂಟ್ನರ್ ಮತ್ತು ಮೆಕ್‌ಕಾಂಚಿ 17ನೇ ಓವರ್‌ನಲ್ಲಿ 18 ರನ್, 18ನೇ ಓವರ್‌ನಲ್ಲಿ 21 ರನ್, 19ನೇ ಓವರ್‌ನಲ್ಲಿ 19 ರನ್, 20ನೇ ಓವರ್‌ನಲ್ಲಿ 12 ರನ್ ಚಚ್ಚಿದ ಕಾರಣ ನ್ಯೂಜಿಲೆಂಡ್ ಮೊತ್ತ 160 ರನ್‌ಗಳ ಗಡಿಯನ್ನು ದಾಟಿತ್ತು.
ಲಂಕಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕಮಿಂದು ಮೆಂಡಿಸ್ 31 ರನ್ ಹೊಡೆದು ಔಟಾದರು. ನ್ಯೂಜಿಲೆಂಡ್ ಪರ 7 ಮಂದಿ ಬೌಲ್ ಮಾಡಿದ್ದರು. ಅದರಲ್ಲೂ ರಚಿನ್ ರವೀಂದ್ರ 27 ರನ್ ನೀಡಿ 4 ವಿಕೆಟ್ ಪಡೆದಿದ್ದು ವಿಶೇಷ. ಇದನ್ನೂ ಓದಿ: Ranji Trophy Final- ರಾಜ್ಯದ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಕಾಶ್ಮೀರದ ನಾಯಕ
Captain to the rescue! 💪
Mitchell Santner’s power-hitting pushes New Zealand’s fightback.
ICC Men’s #T20WorldCup | SUPER 8, #SLvNZ ➡️ LIVE NOW 👉 https://t.co/g4wqt4U8vL pic.twitter.com/p0KW8AcuLA
— Star Sports (@StarSportsIndia) February 25, 2026
ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ 2 ಪಂದ್ಯದಿಂದ 3 ಅಂಕ ಸಂಪಾದಿಸಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಪಂದ್ಯ ಮಳೆಯಿಂದ ರದ್ದಾದ ಕಾರಣ ಇತ್ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿತ್ತು. ಇದನ್ನೂ ಓದಿ: ಹ್ಯಾರಿ ಬ್ರೂಕ್ ಸ್ಫೋಟಕ ಶತಕ – ಇಂಗ್ಲೆಂಡ್ ಸೆಮಿಗೆ, ಪಾಕ್ ಟೂರ್ನಿಯಿಂದ ಔಟ್?

