ವಾಷಿಂಗ್ಟನ್: ನ್ಯೂಯಾರ್ಕ್ ಕೋರ್ಟ್ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 20 ಲಕ್ಷ ಡಾಲರ್(ಅಂದಾಜು 14.25 ಕೋಟಿ ರೂ.) ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
ರಾಜಕೀಯ ಮತ್ತು ವ್ಯವಹಾರಿಕ ಲಾಭಕ್ಕಾಗಿ ತಮ್ಮ ಚಾರಿಟೇಬಲ್ ಟ್ರಸ್ಟ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಟ್ರಂಪ್ ಅವರಿಗೆ ದಂಡ ವಿಧಿಸಿದೆ.
Advertisement
Advertisement
ಸರ್ಕಾರೇತರ ಸಂಸ್ಥೆಗಳನ್ನು ಯಾವುದೇ ದುರುದ್ದೇಶಕ್ಕಾಗಲೀ, ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವಂತಿಲ್ಲ. ಆದರೆ ಟ್ರಂಪ್ ಈ ಸಂಸ್ಥೆಯನ್ನು ವ್ಯವಹಾರ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿ ಕಾನೂನು ಉಲ್ಲಂಘಿಸಿದ್ದಕ್ಕೆ 20 ಲಕ್ಷ ಡಾಲರ್ ದಂಡ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
Advertisement
Advertisement
ವಿಶೇಷ ಏನೆಂದರೆ ಡೊನಾಲ್ಡ್ ಟ್ರಂಪ್ ಪ್ರತಿನಿಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ನ್ಯೂಯಾರ್ಕ್ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಲೆಟಿಟಿಯಾ ಜೇಮ್ಸ್ ಅವರು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಮ್ಮ ಹೋರಾಟಕ್ಕೆ ಅತಿ ದೊಡ್ಡ ಜಯ ಸಿಕ್ಕಿದೆ ಎಂದು ಲೆಟಿಟಿಯಾ ಜೇಮ್ಸ್ ಪ್ರತಿಕ್ರಿಯಿಸಿದ್ದಾರೆ.