ನ್ಯೂಯಾರ್ಕ್: ಇಲಿ (Rat) ಕಾಟವನ್ನು ತಾಳಲಾರದೇ ನ್ಯೂಯಾರ್ಕ್ ಸಿಟಿ ಮೇಯರ್‌ರೊಬ್ಬರು ಇಲಿ ಕೊಲ್ಲಲು ಜನರನ್ನು ನೇಮಿಸುವುದಾಗಿ ಆಹ್ವಾನಿಸಿರುವ ಜಾಹಿರಾತನ್ನು ಹಾಕಿರುವ ವಿಚಿತ್ರ ಘಟನೆ ನಡೆದಿದೆ.
ನ್ಯೂಯಾರ್ಕ್ (New York) ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಎಂದು ವರದಿಯಾಗಿತ್ತು. ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲು ಜನರನ್ನು ನೇಮಿಸುವುದಾಗಿ ಜಾಹೀರಾತು ನೀಡಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಸಂಬಳವನ್ನು ನಿಗದಿ ಪಡಿಸಿದ್ದಾರೆ.
Advertisement
Advertisement
ಜಾಹಿರಾತಿನಲ್ಲಿ ಏನಿದೆ?: ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿಯೂ ವಾರದ 7 ದಿನವೂ ಕೆಲಸ ಮಾಡಬೇಕು. ಜೊತೆಗೆ ದಿನದ 24 ಗಂಟೆಗಳ ಕೆಲಸ ಮಾಡಬೇಕು. ನಗರದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಉತ್ಸಾಹದಿಂದ ಸಮಾಜದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಿವಾಸಿಗಳು ಇಲಿಗಳ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ ಇಲಿಯನ್ನು ಸಾಯಿಸಲು ಯಶಸ್ವಿಯಾದರೆ 1,70,000 ಡಾಲರ್‌ನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಅಂದರೆ ಬರೋಬ್ಬರಿ 1,38,41,663 ರೂ. ಹಣವಾಗಿದೆ. ಇದನ್ನೂ ಓದಿ: ಅಪಘಾತವಾದ್ರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು – ನಿನ್ಯಾವ ಸೀಮೆ MLC ಎಂದು ರವಿಕುಮಾರ್‌ಗೆ ಕ್ಲಾಸ್
Advertisement
Advertisement
ಎರಡು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಈ ವರ್ಷ ನ್ಯೂಯಾರ್ಕ್‍ನಲ್ಲಿ ಇಲಿಗಳ ಕಾಟದ ಕುರಿತಾದ ದೂರುಗಳ ಸಂಖ್ಯೆ ಶೇ. 70ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾನೂನನ್ನು ಪರಿಚಯಿಸಿದ್ದು, ನ್ಯೂಯಾರ್ಕ್ ನಿವಾಸಿಗಳು ರಾತ್ರಿ 8 ಗಂಟೆಯ ನಂತರ ಕಸವನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಸಂಜೆ 4 ಗಂಟೆಯ ನಂತರ ಯಾವುದೇ ಸಮಯದಲ್ಲಿ ಮನೆಗಳ ಹೊರಗೆ ಕಸ ಸುರಿಯಬಹುದು. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್