ಬೆಂಗಳೂರು: ಹೊಸ ವರ್ಷಕ್ಕೆ ಎಲ್ಲಡೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇವತ್ತು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಬೆಂಗಳೂರಿನ ಫ್ಲೈಓವರ್ ಗಳಲ್ಲಿ ಸಂಚಾರ ರದ್ದು ಮಾಡಲಾಗಿದೆ. ಒಂದು ವೇಳೆ ರದ್ದು ಮಾಡಲಾಗಿರುವ ಫ್ಲೈ ಓವರ್ ಮೇಲೆ ಸಂಚಾರ ಮಾಡಿದರೆ ಕೇಸ್ ಬೀಳಲಿದೆ.
ಹೊಸ ವರ್ಷಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಅದರಲ್ಲೂ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವವರ ಹಾಗೂ ಶಾಂತಿಭಂಗ ಮಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಜೊತೆಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
Advertisement
Advertisement
ಎಲ್ಲಿ ವಾಹನ ಸಂಚಾರ ನಿಷೇಧ:
* ಎಂಜಿ ರೋಡ್ – ಅನಿಲ್ ಕುಂಬ್ಳೆ ಸರ್ಕಲ್‍ನಿಂದ ರೆಸಿಡೆನ್ಸಿ ರೋಡ್ ಜಂಕ್ಷನ್.
* ಬ್ರಿಗೇಡ್ ರೋಡ್ – ಕಾವೇರಿ ಎಂಪೋರಿಯಂ ಜಂಕ್ಷನ್‍ನಿಂದ ಅಪೇರಾ ಜಂಕ್ಷನ್.
* ಚರ್ಚ್ ಸ್ಟ್ರೀಟ್ – ಬ್ರಿಗೇಡ್ ರೋಡ್ ಜಂಕ್ಷನ್‍ನಿಂದ ಮ್ಯೂಸಿಯಂ ರೋಡ್ ಜಂಕ್ಷನ್.
* ಮ್ಯೂಸಿಯಂ ರೋಡ್ – ಎಂಜಿ ರೋಡ್ ಜಂಕ್ಷನ್‍ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ.
* ಕಾಮರಾಜ ರಸ್ತೆ – ಕಾವೇರಿ ಎಂಪೋರಿಯಂ ಜಂಕ್ಷನ್‍ನಿಂದ ಕಬ್ಬನ್ ಪಾರ್ಕ್ ರೋಡ್ ಜಂಕ್ಷನ್.
* ರೆಸಿಡೆನ್ಸಿ ಕ್ರಾಸ್ ರೋಡ್ – ರೆಸಿಡೆನ್ಸಿ ರೋಡ್ ಜಂಕ್ಷನ್‍ನಿಂದ ಎಂಜಿ ರೋಡ್ ಜಂಕ್ಷನ್ (ಶಂಕರನಾಗ್ ಥಿಯೇಟರ್).
Advertisement
ಆದರೆ, ಎಂಜಿ ರೋಡ್ ಮೆಟ್ರೋ ನಿಲ್ದಾಣದಿಂದ ಕಾಡುಗೋಡಿ, ಹೊಸಕೋಟೆ, ಸರ್ಜಾಪುರ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್, ನೆಲಮಂಗಲ, ಆರ್.ಕೆ ಹೆಗಡೆ ನಗರ, ಯಲಹಂಕ ಉಪನಗರ, ಬಾಗಲೂರು ನಗರದ ಹಲವು ಕಡೆ ಬಿಎಂಟಿಸಿ ಬಸ್ ವ್ಯವಸ್ಥೆ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv