ಹೊಸ ವರ್ಷಾಚರಣೆ ವೇಳೆ ಜೂಜಾಟ-ಸಿಸಿಬಿ ಪೊಲೀಸರ ದಾಳಿ, 15 ಜನರು ವಶಕ್ಕೆ

Public TV
1 Min Read
ckb joojata

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹಿನ್ನೆಲೆ ಪ್ರತಿಷ್ಠಿತ ಹೋಟೆಲಿನಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 15 ಜನರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಂದಿಬೆಟ್ಟ ರಸ್ತೆಯ ರಾಣಿ ಕ್ರಾಸ್ ಬಳಿಯ ನಂದಿ ಉಪಚಾರ್ ಹೋಟೆಲ್ ಕಟ್ಟಡದ ಅಪಾರ್ಟೆಮೆಂಟ್ ನಲ್ಲಿ ಅಂದರ್ ಬಾಹರ್ ಆಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಲಕ್ಷಣ್ ರಾವ್(ಹೋಟೆಲ್ ಮ್ಯಾನೇಜರ್), ಸೈಯದ್ ರಹೀಂ(ಕ್ಯಾಶಿಯರ್), ಸೇರಿದಂತೆ ಜೂಜಾಟ ಆಡಲು ನೆರೆಯ ರಾಜ್ಯ ಆಂಧ್ರ ಪ್ರದೇಶದಿಂದ ಬಂದಿದ್ದ ಅಖಿಲ್, ಪ್ರಸಾದ್, ರಾಮ್ ಮೋಹನ್ ರೆಡ್ಡಿ, ಮಧುಸೂದನ್, ಸಾಧಿಕ್, ಎಸ್.ಎಂ.ಅಜ್ಮತ್, ಲೋಕೇಶ್, ಶಿವಣ್ಣ, ನಾಗೇಶ್, ರವಿಚಂದ್ರರೆಡ್ಡಿ, ಆದಿಶೇಖರ್ ರೆಡ್ಡಿ,ಪರಮೇಶ್ವರ್ ರೆಡ್ಡಿ, ಶಂಕರ್ ರೆಡ್ಡಿ ಎಂಬುವವರನ್ನ ವಶಕ್ಕೆ ಪಡೆದಿದ್ದಾರೆ.

vlcsnap 2019 12 31 22h40m53s427

ಬಂಧಿತರಿಂದ 2.36 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *