ಚಿಕ್ಕಬಳ್ಳಾಪುರ: ಹೊಸ ವರ್ಷವನ್ನ ಸ್ವಾಗತಿಸೋಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ನ್ಯೂ ಇಯರ್ ಸೆಲಬ್ರೇಷನ್ ಹೆಸರಲ್ಲಿ ಮೋಜು-ಮಸ್ತಿ ಅಂತ ಬಹುತೇಕರು ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಂತ ನೀವು ನಂದಿಬೆಟ್ಟದಲ್ಲಿ ನ್ಯೂ ಇಯರ್ ಸ್ವಾಗತಿಸೋಣ, ಸಂಭ್ರಮಿಸೋಣ ಅಂತ ಪ್ಲಾನ್ ಮಾಡಿಕೊಂಡಿದ್ರೇ ನಿಮ್ಮ ಪ್ಲಾನ್ ಚೆಂಝ್ ಮಾಡಿಕೊಳ್ಳಿ.
Advertisement
ಹೌದು. ಬೆಂಗಳೂರು ಹೊರವಲಯದ ನಂದಿಹಿಲ್ಸ್ (NandiHills) ಅಂದ್ರೆ, ಪ್ರವಾಸಿಗರಿಗೆ ತುಂಬಾ ಅಚ್ಚುಮೆಚ್ಚು. ಅಲ್ಲಿನ ತಂಪಾದ ಹವಾಮಾನ, ಸೂರ್ಯೋದಯ ಹಾಗೂ ಸೂರ್ಯಸ್ತಮದ ವಿಹಂಗಮ ನೋಟ ನೋಡುವುದಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ಕೊಡುತ್ತಾರೆ. ಇಂತಹ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸವರ್ಷ ಸ್ವಾಗತೀಸೋಣ ಅಂತ ನೀವು ಆಸೆ ಇಟ್ಟುಕೊಂಡಿದ್ರೆ ಆ ಆಸೆನಾ ಬಿಡ್ಬಿಡಿ.. ಯಾಕಂದ್ರೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ನಂದಿ ಗಿರಿಧಾಮದಲ್ಲಿ ಮೋಜು-ಮಸ್ತಿ ಮಾಡುವುದಕ್ಕೆ ನಿಷೇಧ ಹೇರಿ ಅದೇಶ ಹೊರಡಿಸಿದೆ. ಇಂದು ಸಂಜೆ 6 ಗಂಟೆಯಿಂದ ನಾಳೆ, ಬೆಳಗ್ಗೆ 6 ಗಂಟೆವರೆಗೂ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
Advertisement
Advertisement
ಕೇವಲ ನಂದಿಬೆಟ್ಟಕ್ಕೆ ಮಾತ್ರವಲ್ಲದೇ, ಅದಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ, ಚನ್ನಗಿರಿ, ಆವುಲ ಹಾಗೂ ಕೈವಾರ ಬೆಟ್ಟಕ್ಕೂ ನಿರ್ಭಂಧವಿಧಿಸಿದೆ. ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್ ರೇಸಾರ್ಟ್ ಹೋಮ್ ಸ್ಟೇ ಮಾಲೀಕರ ಜೊತೆ ಸಭೆ ನಡೆಸಿ, ಲಾಭದ ಆಸೆಗೆ ಬಿದ್ದು ಸರ್ಕಾರ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಪೊಲೀಸರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್
Advertisement
ಹೊಸವರ್ಷ ಆಚರಣೆ ಮಾಡದೆ ಸುಮ್ಮನೆ ಇರೋಕಾಗುತ್ತಾ ಅಂತ ಚಿಕ್ಕಬಳ್ಳಾಪುರ ಪಂಚಗಿರಿಗಳ ಸಾಲಿನತ್ತ ಬಂದ್ರೆ ಅಲ್ಲಿಯೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸರ್ಪಗಾವಲು ಹಾಕಲಾಗುತ್ತಿದೆ. ಆದರೆ ನಾಳೆ ಬೆಳಿಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು, ಅಂದು ಎಂದಿನಂತೆ ಬಂದು ಹೋಗಬಹುದಾಗಿದೆ.