– ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಕಲರ್‌ಫುಲ್
ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ನ್ಯೂಇಯರ್ ಜೋಶ್ ಹೆಚ್ಚಾಗಿದೆ. ಜನರು ಪಾರ್ಟಿ ಮೂಡ್‌ನಲ್ಲಿದ್ರೆ, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಕಲರ್ ಕಲರ್ ಲೈಟಿಂಗ್‌ನೊಂದಿಗೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ನ್ಯೂಇಯರ್ ಸಂಭ್ರಮಾಚರಣೆಯ ಹಾಟ್ ಸ್ಪಾಟ್‌ಗಳಾದ ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದಲ್ಲಿ ಸಿದ್ಧತೆ ನಡೆದಿದೆ.
Advertisement
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಕುಡಿದು ಟೈಟ್ ಆಗೋರಿಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಣಿ ಚೆನ್ನಮ್ಮ ಪಡೆ ಕೂಡ ಕಾರ್ಯ ನಿರ್ವಸಲಿದೆ. 12 ಮಹಿಳಾ ಸೇಫ್ಟಿ ಐಲ್ಯಾಂಡ್, ಹೆಲ್ತ್ ಕೇರ್, ವಾಚ್ ಟವರ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ಅಂತ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಎರಡು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಅದೇ ರೀತಿ ಕೋರಮಂಗಲದಲ್ಲಿಯೂ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ನೀಲಿ ನಕ್ಷೆ ಹಾಕಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 180 ಕ್ಯಾಮೆರಾಗಳನ್ನ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಸಿಸಿಟಿವಿ ಮಾನಿಟರಿಂಗ್‌ಗೆ ಮಿನಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.
Advertisement
ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳು ರಾತ್ರಿ 10 ಗಂಟೆಯ ನಂತರ ಬಂದ್ ಆಗಲಿವೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಫ್ಲೈಓವರ್‌ಗಳು ಬಂದ್ ಆಗಲಿವೆ. ಏರ್‌ಪೋರ್ಟ್ ರೋಡ್ ಹೊರತುಪಡಿಸಿ ಆನಂದ್‌ರಾವ್ ವೃತ್ತ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ ಫ್ಲೈಓವರ್ ಸೇರಿ ಎಲ್ಲಾ ಫ್ಲೈಓವರ್‌ಗಳು ಕ್ಲೋಸ್ ಮಾಡಲಾಗುತ್ತದೆ. ಡ್ರಂಕ್ & ಡ್ರೈವ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ.
Advertisement
ಜನರು ನ್ಯೂಇಯರ್ ಸೆಲೆಬ್ರೆಷನ್‌ನಲ್ಲಿ ಭಾಗಿ ಆಗಿ ಮತ್ತೆ ವಾಪಸ್ ತೆರಳಲು ಮೆಟ್ರೋ, ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಇರಲಿದೆ. ರಾತ್ರಿ 2 ಗಂಟೆಯವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಎಂಜಿ ರೋಡ್‌ನ ಮೆಟ್ರೋ ಸ್ಟೇಷನ್ ಬಂದ್ ಆಗಲಿದೆ. ಟ್ರಿನಿಟಿ ಹಾಗೂ ಕಬ್ಬನ್‌ಪಾರ್ಕ್ ಮೆಟ್ರೋ ಸ್ಟೇಷನ್‌ಗಳು ಓಪನ್ ಇರಲಿವೆ. ಇತ್ತ ಎಂ.ಜಿ. ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ನಗರದ ಕೆಲ ಏರಿಯಾಗಳಿಗೆ ಎಂಜಿ ರೋಡ್‌ನಿಂದ ಬಸ್ ಸೌಲಭ್ಯ ಇರಲಿದೆ.