New Year 2022 – ಅಭಿಮಾನಿಗಳಿಗೆ ಸಂದೇಶ ನೀಡಿದ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು

Public TV
2 Min Read
Sandalwood

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಟಿಯರು ಹೊಸ ವರ್ಷವನ್ನು ಭರ್ಜರಿಯಾಗಿ ವೆಲ್ ಕಮ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿ ಈ ವರ್ಷದ ಸಂದೇಶವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಅಭಿಮಾನಿಗಳಿಗೆ ವಿಷೇಶವಾಗಿ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಪ್ರತಿ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯ ಹಾಗೂ ಕೆಟ್ಟ ಘಳಿಗೆಗಳು ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು ಹೊಸ ವರ್ಷದಲ್ಲಿ ಒಳ್ಳೆಯದನ್ನು ಬಯಸೋಣ. 2022ರ ಸುಂದರ ಸೂರ್ಯೋದಯವನ್ನು ನೋಡೋಣ. ಹೊಸ ವರ್ಷವನ್ನು ಅತ್ಯುತ್ತಮವಾಗಿ ಆಚರಿಸೋಣ. ಮನುಕುಲಕ್ಕೆ ನಮ್ಮಿಂದಾಗಬಹುದಾದ ಒಳ್ಳೆಯದನ್ನು ಮಾಡೋಣ. ಎಲ್ಲರಿಗೂ 2022ರ ಶುಭಾಶಯಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ವಿಕ್ರಾಂತ್ ರೋಣಾ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.

ಭರವಸೆಯೇ ಬದುಕು, ಒಳ್ಳೆಯದನ್ನೇ ನಿರೀಕ್ಷಿಸೋಣ, ಒಳ್ಳೆಯದನ್ನೇ ಬಯಸೋಣ. ಕಲಿತು ಬದುಕೋಣ, ಕಲೆತು ಬಾಳೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡ ನಿರ್ದೇಶಕ ತರುಣ್ ಸುದೀರ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಈ ದಿನದಿಂದ, ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ನಟ ರಮೇಶ್ ಅರವಿಂದ್ ಅವರು, ಹೊಸ ವರ್ಷದ ಶುಭಾಶಯಗಳು. 2022 ಸಹಬಾಳ್ವೆಯನ್ನು ಸಂಭ್ರಮಿಸುವ ವರ್ಷವಾಗಲಿ. ನಿಮ್ಮ ಬದುಕು ಅಮೋಘವಾಗಿ ಸಾಗಲಿ. ಇನ್ನೊಬ್ಬರ ಬದುಕೂ ಸಲೀಸಾಗಿ ಸಾಗಲು ಸಹಕರಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ನ್ಯೂ ಇಯರ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

ರಚಿತಾರಾಮ್, ಪ್ರಜ್ವಲ್ ದೇವರಾಜ್, ರಾಗಿಣಿ ಸೇರಿದಂತೆ ಅನೇಕ ನಟ, ನಟಿಯರು ಹೊಸವರ್ಷದ ಸಂದೇಶವನ್ನು ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ನೀಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

Share This Article
Leave a Comment

Leave a Reply

Your email address will not be published. Required fields are marked *