ವಾಷಿಂಗ್ಟನ್: 2020ರಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್ ಇದೀಗ ಮತ್ತೊಂದು ಹೊಸ ರೂಪ (Covid New Variant) ಪಡೆದುಕೊಂಡಿದೆ.
ಎಕ್ಸ್‌ಇಸಿ (XEC) ಎಂಬ ಹೆಸರಿನ ಕೋವಿಡ್ ರೂಪಾಂತರ ಯುರೋಪ್ ದೇಶಗಳಲ್ಲಿ (Europe Countries) ಪತ್ತೆಯಾಗಿದ್ದು, ಸುಮಾರು 27 ದೇಶಗಳಿಗೆ ಭಾರಿ ಆತಂಕ ಹುಟ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!
Advertisement
Advertisement
ಮೂಲಗಳ ಪ್ರಕಾರ, ಒಮಿಕ್ರಾನ್ ಉಪತಳಿಯಾಗಿರುವ ಎಕ್ಸ್‌ಇಸಿ ರೂಪಾಂತರವನ್ನು ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು. ಬಳಿಕ ಯುಕೆ, ಯುಎಸ್ (USA), ಡೆನ್ಮಾರ್ಕ್, ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್ (Ukraine), ಪೋರ್ಚುಗಲ್ ಸೇರಿದಂತೆ ಸುಮಾರು 27 ದೇಶಗಳಲ್ಲಿ 500 ಮಾದರಿಗಳು ಕಾಣಿಸಿಕೊಂಡಿವೆ.
Advertisement
ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಅದರಲ್ಲಿ ಜರ್ಮನಿ, ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಮಾರಣಾಂತಿಕ ಪ್ರಮಾಣದಲ್ಲಿ ವೈರಸ್ ಹರಡುತ್ತಿವೆ. ಎಚ್ಚೆತ್ತು ಆದಷ್ಟು ಬೇಕ ಲಸಿಕೆ ಪಡೆದುಕೊಂಡರೇ ಕನಿಷ್ಠ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಲಂಡನ್‌ನಲ್ಲಿರುವ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್.1? ಇದು ಅಪಾಯಕಾರಿಯೇ?
Advertisement
XEC ರೂಪಾಂತರದ ಲಕ್ಷಣಗಳೇನು?
* ಜ್ವರ
* ಗಂಟಲು ನೋವು
* ಕೆಮ್ಮು
* ವಾಸನೆ ಗ್ರಹಿಕೆ ಕಳೆದುಕೊಳ್ಳುವುದು
* ಹಸಿವಾಗದೇ ಇರುವುದು
* ಮೈ-ಕೈ ನೋವು ಸೇರಿದಂತೆ ಹಿಂದಿನ ಕೋವಿಡ್ ಲಕ್ಷಣಗಳು
ಪರಿಹಾರ ಏನು?
* ಲಕ್ಷಣಗಳು ಕಂಡುಬಂದ ಕೂಡಲೇ ತಪಾಸಣೆಗೆ ಒಳಗಾಗಿ ಲಸಿಕೆ ಪಡೆದುಕೊಳ್ಳುವುದು
* ಶುದ್ಧ ಗಾಳಿ, ನೀರು ಸೇವನೆಯೊಂದಿಗೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು
* ರೋಗ ಲಕ್ಷಣಗಳ ಬಗ್ಗೆ ತಿಳಿಯಲು ಮುಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಗಾಗುವುದು