ನವದೆಹಲಿ: ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಮುಂದಿನ ತಿಂಗಳ ಜುಲೈ 1ರಿಂದಲೇ ಈ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Advertisement
ಹೊಸ ವೇತನ ಸಂಹಿತೆಯು ಉದ್ಯೋಗಿಗಳ ಕೆಲಸದ ಸಮಯ, ವೇತನ ಪುನರ್‌ರಚನೆ, ಪಿಎಫ್, ಗ್ರ್ಯಾಚುಟಿ ಕೊಡುಗೆಯಲ್ಲಿ ಬದಲಾವಣೆ ತರಲಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕಾರ್ಮಿಕ ಸಚಿವಾಲಯ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 90ರ ದಶಕದಲ್ಲಿಯೇ ಅಗ್ನಿಪಥ್ ಜಾರಿಗೆ ತರಲು ಚಿಂತಿಸಿತ್ತು: ಉಮೇಶ್ ಕತ್ತಿ ಹೊಸ ಬಾಂಬ್
Advertisement
ಕೈಗೆ ಕಡಿಮೆ ಸಂಬಂಳ, ಪಿಎಫ್ ಹೆಚ್ಚಳ: ಹೊಸ ಸಂಹಿತೆಗಳು ಜಾರಿಗೆ ಬಂದರೆ, ನೌಕರರ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆಯಾಗಲಿದ್ದು, ಭವಿಷ್ಯ ನಿಧಿ (PF) ಖಾತೆಗೆ ಜಮೆ ಆಗುವ ಮೊತ್ತ ಹೆಚ್ಚಳವಾಗಲಿದೆ. ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇ.50ರಷ್ಟನ್ನು ಮೀರುವಂತಿಲ್ಲ. ಅಂದರೆ ಒಟ್ಟು ವೇತನದಲ್ಲಿ ಶೇ.50ರಷ್ಟು ಭಾಗವು ಮೂಲ ವೇತನ ಆಗಿರಬೇಕು. ಪಿಎಫ್ ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರರ ಮೂಲವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇದನ್ನೂ ಓದಿ: ಕ್ರೆಡಿಟ್, ಡೇಬಿಟ್ ಕಾರ್ಡ್ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್
Advertisement
Advertisement
12 ಗಂಟೆ ಕೆಲಸ: ಹೊಸ ಕರಡು ನಿಯಮ ಪ್ರಕಾರ, ಕೆಲಸದ ಸಮಯವನ್ನು ಕಡಿತಗೊಳಿಸಲಾಗುವುದು. ವಾರದಲ್ಲಿ ನಾಲ್ಕು ದಿನ ಕೆಲಸ ಇರಲಿದ್ದು, ನಾಲ್ಕು ದಿನವೂ 12 ಗಂಟೆಗಳು ಮಾತ್ರ ಕೆಲಸ ಇರಲಿದೆ. ಆದರೆ ಕಾರ್ಮಿಕ ಸಚಿವಾಲಯವು ವಾರದಲ್ಲಿ 48 ಗಂಟೆಗಳ ಕೆಲಸ ಅಗತ್ಯವಾಗಿ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದೆ.
ರಜೆಯ ಅವಧಿಯಲ್ಲಿ ಬದಲಾವಣೆ: ಸರ್ಕಾರಿ ಇಲಾಖೆಗಳು ಈಗ 1 ವರ್ಷದಲ್ಲಿ 30 ರಜೆಗಳನ್ನು ಅನುಮತಿಸುತ್ತವೆ. ರಕ್ಷಣಾ ನೌಕರರಿಗೆ ವರ್ಷದಲ್ಲಿ 60 ರಜೆಗಳನ್ನು ಪಡೆಯುತ್ತಾರೆ. ಆದರೆ ಹೊಸ ನೀತಿಯ ಪ್ರಕಾರ ರಜೆ ಅವಧಿಯೂ ಹೆಚ್ಚಾಗಲಿದೆ. 20 ವರ್ಷಗಳ ಸೇವೆ ಸಲ್ಲಿಸಿದ ನೌಕರರು ವೇತನ ಸಹಿತ ರಜೆಯನ್ನೂ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಇಲ್ಲಿಯವರೆಗೆ 23 ರಾಜ್ಯಗಳು ಈ ಅಧಿನಿಯಮವನ್ನು ಪ್ರಕಟಿಸಿವೆ.