ನವದೆಹಲಿ: ಸ್ಕೂಟರ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಪಿಯಾಜಿಯೋ ವೆಸ್ಪಾ ಸ್ಕೂಟರ್ ತಯಾರಿಕಾ ಕಂಪನೆಯು ತನ್ನ ನೂತನ ನೊಟ್ಟೆ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಸಂಸ್ಥೆ ತನ್ನ ನೂತನ ವೆಸ್ಪಾ ನೊಟ್ಟೆ 125 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಸ್ಕೂಟರ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ ವೆಸ್ಪಾ, ಹೊಂಡಾದ ಆಕ್ಟೀವಾ 125 ಸಿಸಿ ವಿಭಾಗದ ಸ್ಕೂಟರ್ ಗೆ ಪ್ರತಿಸ್ಪರ್ಧಿಯಾಗಿ ಈ ಆವೃತ್ತಿಯನ್ನು ಹೊರತಂದಿದೆ.
Advertisement
Advertisement
ಬೆಲೆ ಎಷ್ಟು? ಎಷ್ಟು ಬಣ್ಣಗಳಲ್ಲಿ ಸಿಗುತ್ತೆ?
ದೆಹಲಿಯ ಎಕ್ಸ್ ಶೋರೂಂ ಪ್ರಕಾರ 70,285 ರೂಪಾಯಿಯನ್ನು ನಿಗದಿಪಡಿಸಿದೆ. ನೂತನ ವೆಸ್ಪಾ ನೊಟ್ಟೆ ಸದ್ಯ ಮ್ಯಾಟ್ ಬ್ಲಾಕ್ ಬಣ್ಣಗಳಲ್ಲಿ ದೊರೆಯುತ್ತದೆ.
Advertisement
ವೆಸ್ಪಾ ನೊಟ್ಟೆ 135 ಎಂಜಿನ್ ಸಾಮರ್ಥ್ಯ:
ಹೊಸ ವೆಸ್ಪಾ ನೊಟ್ಟೆ 125 ಸ್ಕೂಟರ್ 125 ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್, 3 ವಾಲ್ವ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 9.5 ಬಿಹೆಚ್‍ಪಿ ಮತ್ತು 9.9ಎನ್‍ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯಹೊಂದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ ಪ್ರತಿ ಲೀಟರ್ ಗೆ ಒಟ್ಟು 60 ಕಿ.ಮೀ. ಮೈಲೇಜ್ ಸಿಗುತ್ತೆ.
Advertisement
ಇತರೆ ಫೀಚರ್ ಗಳು:
ಕ್ರೋಮ್ ಟ್ರೀಟ್ಮೆಂಟ್, ಬ್ಲ್ಯಾಕ್ ಔಟ್ ವೀಲ್ ರಿಮ್ಸ್, ಅತ್ಯಾಧುನಿಕ ಗ್ರಾಫಿಕ್ಸ್ ವಿನ್ಯಾಸ ಹೊಂದಿದೆ. 770 ಎಂಎಂ ಎತ್ತರ ಹೊಂದಿದ್ದು, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು ಒಟ್ಟು 7 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ 114 ಕಿ.ಜಿ ತೂಕವನ್ನು ಹೊಂದಿದ್ದು, 100 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.