ಮೈಸೂರು: ಜಿಲ್ಲೆಯ ನಂಜನಗೂಡು (Nanjangud) ಪಟ್ಟಣದ 17 ವರ್ಷದ ಯುವತಿ ದಿವ್ಯಾ ಯುವಕನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.
ಪ್ರಕರಣಕ್ಕೆ ತಿರುವು ನೀಡುವಂತ ಆಡಿಯೋ (Audio) ಮತ್ತು ಫೋಟೋಗಳು ಈಗ ಲಭ್ಯವಾಗಿವೆ. ಈ ಮೂಲಕ ಅಪ್ರಾಪ್ತೆ ಸಾವಿಗೆ ಕಾರಣ ಯುವಕನೋ? ಅಥವಾ ಪೋಷಕರೋ? ಎಂಬ ಅನುಮಾನ ಸೃಷ್ಟಿಯಾಗಿವೆ. ಇದನ್ನೂ ಓದಿ: ಪ್ರೀತಿಸುವಂತೆ ಪಾಗಲ್ ಪ್ರೇಮಿ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ
ದಿವ್ಯ ಸಾವಿಗೆ ಪೋಷಕರು ಅವರ ಪ್ರೀತಿಗೆ ತೋರಿದ ವಿರೋಧವೇ ಕಾರಣ ಎನ್ನುವ ಅನುಮಾನ ಮೂಡಿದೆ. ಆರೋಪ ಹೊತ್ತಿರುವ ದಿವ್ಯ ಪ್ರಿಯಕರ ಆದಿತ್ಯ ಸ್ಫೋಟಕ ಮಾಹಿತಿ ಬಯಲು ಮಾಡಿದ್ದಾನೆ. ದಿವ್ಯ ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವೇಳೆ ಆದಿತ್ಯನ ಜೊತೆ ಲವ್ ಆಗಿತ್ತು. ಇದನ್ನೂ ಓದಿ: Video Viral | ಪೊಲೀಸರ ಕಣ್ಣೆದುರೇ ಯುವಕರು ಡೆಡ್ಲಿ ಬೈಕ್ ವ್ಹೀಲಿಂಗ್
ದಿವ್ಯ ತನ್ನನ್ನು ಮನೆಯಿಂದ ಕರೆದುಕೊಂಡು ಹೋಗುವಂತೆ ಯುವಕನ ಜೊತೆ ಮಾತನಾಡಿರುವ ಆಡಿಯೋ ಲಭ್ಯವಾಗಿದೆ. ಪ್ರೀತಿ ಮಾಡುವಾಗ ಚಾಮುಂಡಿ ಬೆಟ್ಟ ಸೇರಿದಂತೆ ಹಲವು ಕಡೆ ಇವರು ಸುತ್ತಾಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ. ಯುವತಿ ಸಾವಿಗೆ ಪೋಷಕರೇ ಕಾರಣ ಎಂದು ಆದಿತ್ಯ ಹೇಳಿಕೆ ನೀಡಿದ್ದಾನೆ.


