– ಶೂಟೌಟ್ ವಿಡಿಯೋ ಫುಲ್ ವೈರಲ್
ನವದೆಹಲಿ: ದೆಹಲಿಯ ರಾಜೌರಿ ಗಾರ್ಡನ್‍ನ ಬರ್ಗರ್ ಕಿಂಗ್‍ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಹನಿಟ್ರ್ಯಾಪ್ ಮೂಲಕ ಕರೆಸಿ ವ್ಯಕ್ತಿಯನ್ನು ಹತ್ಯೆಗೈದ ಶಂಕೆ ವ್ಯಕ್ತವಾಗಿದೆ.
Advertisement
ಜೂ.18 ರಂದು ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‍ನಲ್ಲಿರುವ ಬರ್ಗರ್ ಕಿಂಗ್ ಔಟ್‍ಲೆಟ್‍ನೊಳಗೆ ಅಮನ್ (26) ಎಂಬಾತನನ್ನು ಹತ್ಯೆಗೈಯಲಾಗಿತ್ತು. ಈ ವೇಳೆ ಆತನೊಂದಿಗೆ ಕುಳಿತಿದ್ದ ಮಹಿಳೆ ತನ್ನ ಫೋನ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರವನ್ನು ತೋರಿಸಿದ್ದಾಳೆ. ಈ ವೇಳೆ ಮೊದಲ ಗುಂಡು ಹಾರಿಸಲಾಯಿತು. ಬಳಿಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಪಿಸ್ತೂಲುಗಳಿಂದ ಆತನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಅಮನ್ ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿಹೋಗಿದ್ದಾನೆ. ಆತನನ್ನು ಹಿಂಬಾಲಿಸಿ ಪಾಯಿಂಟ್-ಬ್ಲಾಂಕ್ ರೇಂಜ್‍ನಿಂದ ಅನೇಕ ಬಾರಿ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ರಾಜ್ಯ 7ನೇ ವೇತನ ಆಯೋಗ ಜಾರಿ ವಿಚಾರ- ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!
Advertisement
Advertisement
ಶೂಟೌಟ್ ನಡೆಯುವಾಗ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ. ಆದರೆ ಅಮನ್ ಜೊತೆ ಕುಳಿತಿದ್ದ ಮಹಿಳೆ ಘಟನೆಯಿಂದ ವಿಚಲಿತಳಾಗದೆ ಅಲ್ಲೇ ಇದ್ದಳು. ಬಳಿಕ ಅಮನ್‍ನ ಫೋನ್ ಮತ್ತು ವ್ಯಾಲೆಟ್‍ನೊಂದಿಗೆ ಆಕೆ ಪರಾರಿಯಾಗಿದ್ದಾಳೆ. ಈಗ ಕೃತ್ಯದಲ್ಲಿ ಮಹಿಳೆಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಮಹಿಳೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಇಬ್ಬರು ಶೂಟರ್‍ಗಳು ಎರಡಕ್ಕಿಂತ ಹೆಚ್ಚು ಗನ್ ಬಳಸಿ 38 ಗುಂಡುಗಳನ್ನು ಹಾರಿಸಿದ್ದಾರೆ. ಕೃತ್ಯಕ್ಕೆ ಬೇರೆ ಬೇರೆ ಮಾದರಿಯ ಗನ್ ಬಳಸಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಪೋರ್ಚುಗಲ್ ಸಂಪರ್ಕ
ಪರಾರಿಯಾಗಿರುವ ದರೋಡೆಕೋರ ಹಿಮಾಂಶು ಭಾವು, ಈಗ ಪೋರ್ಚುಗಲ್‍ನಲ್ಲಿದ್ದಾನೆ ಎಂದು ಶಂಕಿಸಲಾಗಿದ್ದು, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕೊಲೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾನೆ. ನಮ್ಮ ಸಹೋದರ ಶಕ್ತಿ ದಾದಾನ ಹತ್ಯೆಯಲ್ಲಿ ಅಮನ್ ಭಾಗಿಯಾಗಿದ್ದ. ಅದಕ್ಕಾಗಿ ಇದು ಸೇಡು ಎಂದು ಹಿಮಾಂಶು ಭಾವು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ಮತ್ತು ಹರಿಯಾಣದಾದ್ಯಂತ ಹಿಮಾಂಶು ಭಾವು ಸುಲಿಗೆಗೆ ಕುಖ್ಯಾತನಾಗಿದ್ದಾನೆ. ಆತ ಜೈಲಿನಲ್ಲಿರುವ ದರೋಡೆಕೋರ ನೀರಜ್ ಬವಾನಾ ಸಹಚರನಾಗಿದ್ದಾನೆ. ಆತ 2022 ರಲ್ಲಿ ದೇಶದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು