ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಮುಂದಾಗಿದೆ. ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿ ಸದ್ಯ 40 ಸಾವಿರ ರೂಪಾಯಿ ಇದ್ದು, ಇದನ್ನು 20 ಸಾವಿರ ರೂಪಾಯಿಗೆ ಇಳಿಸಲು ನಿರ್ಧಾರ ಮಾಡಿದೆ.
ಈ ನೂತನ ನಿಯಮವು ಇದೇ ಅಕ್ಟೋಬರ್ 31 ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಕ್ಲಾಸಿಕ್ ಮತ್ತು ಮೆಸ್ಟ್ರೊ ಕಾರ್ಡ್ ಹೊಂದಿದವರು ದಿನಕ್ಕೆ ಗರಿಷ್ಟ ಕೇವಲ 20 ಸಾವಿರ ರೂ. ಮಾತ್ರ ಡ್ರಾ ಮಾಡಬಹುದು ಎಂದು ಎಸ್‍ಬಿಐ ತನ್ನ ವೆಬ್‍ಸೈಟ್ ನಲ್ಲಿ ಹೇಳಿದೆ.
ಎಸ್‍ಬಿಐ ಗೋಲ್ಡ್ ಮತ್ತು ಪ್ಲಾಟಿನಂ ಬಳಕೆದಾರರಿಗೆ ಹೊಸ ನಿಯಮ ಅನ್ವಯವಾಗುವುದಿಲ್ಲ. ಗೋಲ್ಡ್ ಕಾರ್ಡ್ ಹೊಂದಿರುವವರು 50 ಸಾವಿರ, ಪ್ಲಾಟಿನಂ ಕಾರ್ಡ್ ಹೊಂದಿರುವವರು 1 ಲಕ್ಷ ರೂ. ವರೆಗೆ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಇದನ್ನು ಓದಿ: ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ
ಕ್ಲಾಸಿಕ್ ಮತ್ತು ಮೆಸ್ಟ್ರೊ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ದಿನನಿತ್ಯದ ಎಟಿಎಂ ಹಣ ಪಡೆಯುವ ಮಿತಿಯನ್ನ ಹೆಚ್ಚಿಸಿಕೊಳ್ಳಬೇಕಾದರೆ ಅಧಿಕ ಮಿತಿಯ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ದೇಶದಲ್ಲಿ ಎಟಿಎಂ ನಿಂದ ಹಣ ಕಳವು, ಮೋಸದ ವ್ಯವಹಾರಗಳನ್ನ ತಡೆಯಲು ಮತ್ತು ಡಿಜಿಟಲ್ ವ್ಯವಹಾರವನ್ನ ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ. ಇದನ್ನು ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?
ಇತ್ತೀಚಿನ ದಿನಗಳಲ್ಲಿ ಎಸ್‍ಬಿಐ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಕಾರ್ಯವೈಖರಿಯನ್ನು ಬದಲಾಯಿಸುತ್ತಿದೆ. ಗ್ರಾಹಕರು ತಮ್ಮ 15ಜಿ/ಹೆಚ್ (ಶ್ರೀಸಾಮಾನ್ಯರು/ಹಿರಿಯನಾಗರಿಕರು) ಅರ್ಜಿಯನ್ನ ಯಾವ ಶಾಖೆಯಲ್ಲಿ ಬೇಕಾದರೂ ಸಲ್ಲಿಸಬಹುದು ಮತ್ತು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕೂಡ ಕಲ್ಪಿಸಿದೆ ಎಂದು ತಿಳಿಸಿದೆ.
ಒಟ್ಟು 39.50 ಕೋಟಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಗಳನ್ನ ವಿತರಿಸಿದ್ದು, ಸುಮಾರು 26 ಕೋಟಿ ದಿನನಿತ್ಯ ಬಳಕೆದಾರರಿದ್ದಾರೆ ಎಂದು ಎಸ್‍ಬಿಐ ಮಾರ್ಚ್ ನಲ್ಲಿ ತಿಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv