ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ 24 ಗಂಟೆಯಲ್ಲೇ 5 ಕೋಟಿಗೂ ಅಧಿಕ ವ್ಯೂ ಗಳಿಸಿದ ಮೊದಲ ಟ್ರೇಲರ್ ಎಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿದೆ.
ಬಾಹುಬಲಿ ಚಿತ್ರತಂಡ ಈ ವಿಚಾರವನ್ನು ಟ್ವೀಟ್ ಮಾಡಿ ಸಿನಿಮಾಗೆ ಪ್ರೋತ್ಸಾಹ ನೀಡಿ ಟ್ರೇಲರ್ ವೀಕ್ಷಿಸಿದವರಿಗೆ ಧನ್ಯವಾದ ಹೇಳಿದೆ.
Advertisement
ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿರುವ ಟ್ರೇಲರ್ ಗುರುವಾರ ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿತ್ತು. ತೆಲುಗು ಭಾಷೆಯ ಟ್ರೇಲರ್ ಇದೂವರೆಗೂ 2.23 ಕೋಟಿ ವ್ಯೂ ಕಂಡರೆ, ಹಿಂದಿ ಟ್ರೇಲರ್ 1.64 ಕೋಟಿ ವ್ಯೂ ಕಂಡಿದೆ. ಮಲೆಯಾಳಂ ಟ್ರೇಲರ್ 5.59 ಲಕ್ಷ ವ್ಯೂ ಕಂಡರೆ, ತಮಿಳು ಟ್ರೇಲರ್ 3.02 ಕೋಟಿ ವ್ಯೂ ಕಂಡಿದೆ.
Advertisement
This is not Considering the trailer went viral on whatsapp before we released..????
THANK YOU is small a word.. ???????????????????????? #BB2Storm
— rajamouli ss (@ssrajamouli) March 17, 2017
Advertisement
ಭಾರತದಲ್ಲಿ ಈ ಹಿಂದೆ ರಾಯಿಸ್ ಟ್ರೇಲರ್ ಬಿಡುಗಡೆಯಾದ 24 ಗಂಟೆಯಲ್ಲಿ 1.19 ಕೋಟಿ ವ್ಯೂ ಕಂಡಿದ್ದರೆ, ದಂಗಲ್ ಚಿತ್ರ 96 ಲಕ್ಷ ವ್ಯೂ ಕಂಡಿತ್ತು.
Advertisement
ಬಾಹುಬಲಿ ಚಿತ್ರ ತಂಡ ಗುರುವಾರ ಬೆಳಗ್ಗೆ ಥಿಯೇಟರ್‍ನಲ್ಲಿ ಬಿಡುಗಡೆ ಮಾಡಿ ಸಂಜೆ ಯೂ ಟ್ಯೂಬ್‍ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಥಿಯೇಟರ್‍ನಲ್ಲಿ ಬಿಡುಗಡೆಯಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್‍ಲ್ಲಿ ರಿಲೀಸ್ ಮಾಡಿದೆ.
ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿತ್ತು.`ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕು ಹೊಂದಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದರು. ಈ ಟೀಸರ್ನಲ್ಲಿ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿತ್ತು.
ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವಿಶ್ವದೆಲ್ಲೆಡೆ ಬಾಹುಬಲಿ ಟ್ರೇಲರ್ ಟ್ರೆಂಡ್ ಕ್ರಿಯೆಟ್ ಮಾಡಿತ್ತು. ಜನವರಿ 26ರಂದು ರಾಜಮೌಳಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ನಿಂತುಕೊಂಡು ಬಾಣ ಬಿಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದಕ್ಕೂ ಮೊದಲು ರಾಣಾ ದಗ್ಗುಬಾಟಿ ಮತ್ತು ಪ್ರಭಾಸ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದರು.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದು ವಿಶ್ವದಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.
ಬಾಹುಬಲಿ ದಿ ಬಿಗಿನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
ಸಿನಿಮಾಗಳಿಗೆ ಟ್ರೇಲರ್ ರಿಲೀಸ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಟ್ರೇಲರ್ ರಿಲೀಸ್ ಗೆ ರಾಜಮೌಳಿ 12 ಸೆಕೆಂಡಿನ ಸಣ್ಣ ಪ್ರೋಮೋ ರಿಲೀಸ್ ಮಾಡಿದ್ದರು. ಟ್ರೇಲರ್ ಗೆ ಪ್ರೋಮೋ ರಿಲೀಸ್ ಮಾಡಿದ್ದು ಭಾರತೀಯ ಚಿತ್ರರಂಗದಲ್ಲಿ ಮೊದಲು ಎಂದು ಹೇಳಲಾಗುತ್ತಿದೆ. ಈ ಪ್ರೋಮೋ ಇದೂವರೆಗೂ 42 ಲಕ್ಷ ವ್ಯೂ ಕಂಡಿದೆ.
ಇದನ್ನೂ ಓದಿ: ಬಾಹುಬಲಿಯನ್ನು ಕೊಂದಿದ್ದು ಯಾಕೆ: ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!
50 Million cumulative views of our trailer, across all languages, on YT & FB. The most viewed Indian movie trailer in 24hours. #BB2Storm pic.twitter.com/BPSwQbTzzb
— rajamouli ss (@ssrajamouli) March 17, 2017
I can't express the appreciation I've for our friends, fans, well wishers and media for treating Baahubali as their own. Thank you 🙂
— rajamouli ss (@ssrajamouli) March 17, 2017
.@ssk1122 (Showing Business) supervised & Vamsi Atluri from Arka edited the trailer,capturing d essence of the film perfectly.
Gr8 job guys
— rajamouli ss (@ssrajamouli) March 17, 2017
#Baahubali2 Trailer shatters all the Indian @YouTube records! https://t.co/kemlrAUtVl@ssrajamouli @BaahubaliMovie @RanaDaggubati @Shobu_ pic.twitter.com/uQSNjS4Tox
— MovieCrow (@MovieCrow) March 17, 2017
ತೆಲುಗು ಟ್ರೇಲರ್
ಹಿಂದಿ ಟ್ರೇಲರ್
ಮಲೆಯಾಳಂ ಟ್ರೇಲರ್
ತಮಿಳು ಟ್ರೇಲರ್
ಪ್ರೋಮೋ ಟ್ರೇಲರ್ ವಿಡಿಯೋ