ನಟ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ಆತ್ಮವಿಶ್ವಾಸದಿಂದಲೋ, ಅಹಂಕಾರದಿಂದಲೋ ಹೇಳಿಕೊಂಡಿರುವ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎನ್ನುವ ಮಾತು ಅಕ್ಷರಶಃ ರಿಯಲ್ ಸ್ಟಾರ್ ಗೆ ಒಪ್ಪುತ್ತದೆ. ಕಾರಣ ಉಪ್ಪಿ ಯಾವಾಗಲೂ ವಿಭಿನ್ನ, ಯಾವತ್ತಿಗೂ ಭಿನ್ನ.
ಸಾಮಾನ್ಯವಾಗಿ ಸಿನಿಮಾಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ, ನೀಡಬೇಕು. ಆದರೆ, ಉಪ್ಪಿ ಚಿತ್ರಗಳು ಮಾತ್ರ ಮನಸ್ಸಿನ ಜತೆ ಮೆದುಳಿಗೂ ಕೆಲಸ ಕೊಡುತ್ತವೆ. ಪರಪರ ಅಂತ ತಲೆಕೆರೆದುಕೊಳ್ಳುವಂತೆ ಮಾಡುತ್ತವೆ. ಹಾಗಾಗಿಯೇ ಪ್ರೀತಿಯಿಂದ ಉಪ್ಪಿದಾದಾನ ‘ಬುದ್ಧಿವಂತ’ ನಿರ್ದೇಶಕ ಎಂದಿದೆ ಚಿತ್ರರಂಗ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ
Advertisement
Advertisement
ಉಪ್ಪಿ 2 ಸಿನಿಮಾದ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಬರೋಬ್ಬರಿ ಏಳು ವರ್ಷಗಳ ನಂತರ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಸಿನಿಮಾ ವಿಭಿನ್ನವಾಗಿ ಇರಲೇಬೇಕು ಎನ್ನುವುದು ಅವರ ಪಾಲಿಸಿ. ಅದರಂತೆ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ಫೋಸ್ಟರೇ ಹೊಸದೊಂದು ಕಥೆ ಹೇಳುವಂತಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾದಂತೆ ಮಜಾ ಕೊಡುತ್ತದೆ. ನೀವೂ ಒಂದ್ ಸಲ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ನಿಮ್ಮ ತಲೆಗೂ ಮತ್ತೊಂದು ಹೊಳವು ಕಾಣಬಹುದು.
Advertisement
ಮೇಲ್ನೋಟಕ್ಕೆ ಪೋಸ್ಟರ್ ನೋಡಿದಾಗ ಕುದುರೆ ಮೇಲೆ ಕೂತಿರುವ ಉಪೇಂದ್ರ, ಸಿನಿಮಾದ ಶೀರ್ಷಿಕೆ, ನಿರ್ದೇಶಕರ ಹೆಸರು, ನಿರ್ಮಾಪಕರ ಹೆಸರು ಇವಿಷ್ಟು ಕಾಣುತ್ತದೆ. ಆದರೆ, ಪೋಸ್ಟರ್ ಅನ್ನು ಆಳವಾಗಿ ಗಮನಿಸಿದಾಗ ದೊಡ್ಡದೊಂದು ಜಗತ್ತೇ ಅಲ್ಲಿದೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್
Advertisement
ಏನು ಹೇಳತ್ತೆ ಟೈಟಲ್ ?
ಸಡನ್ನಾಗಿ ಧಾರ್ಮಿಕ ಚಿಹ್ನೆ ಅಂತ ಕಾಣುವ ಸಿನಿಮಾದ ಟೈಟಲ್, ಅವರವರ ಭಾವಕ್ಕೆ ತಕ್ಕಂತೆ ಅದು ದಕ್ಕುತ್ತದೆ. ‘ಯು’ ಮತ್ತು ‘ಐ’ ಎಂದೂ ಓದಿಕೊಳ್ಳಬಹುದು. ನಾನು ಮತ್ತು ನೀನು ಎರಡೇ ಕಾನ್ಸೆಪ್ಟ್ ಇಟ್ಟುಕೊಂಡು ಉಪ್ಪಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ‘ಎ’, ‘ಉಪೇಂದ್ರ’, ಮತ್ತು ‘ಉಪ್ಪಿ2’ ಸಿನಿಮಾದ ಕಥೆ ‘ನಾನು ಮತ್ತು ನೀನು’ ಎನ್ನುವ ಆಧ್ಯಾತ್ಮದ ತುದಿಯೊಂದಿಗೆ ಸಾಗಿದ್ದರು. ಹೀಗಾಗಿ ಅದರ ಮುಂದುವರೆಕೆಯ ಭಾಗವಾ ಹೊಸ ಸಿನಿಮಾ ಅನಿಸುತ್ತದೆ. ಇನ್ನೊಂದು ರೀತಿಯಲ್ಲಿ ಟೈಟಲ್ ಕುದುರೆ ಲಾಳದಂತೆಯೂ ಕಾಣುತ್ತದೆ. ‘ಯು’ ಮತ್ತು ‘ಎ’ ಅಂತಾನೇ ಅಂದುಕೊಳ್ಳುವುದಾದರೆ, ಹಾರ್ಸ್ಶೋ ಮತ್ತು ಹಾರ್ಸ್ ಮ್ಯಾನ್ ಅಂತಾನೂ ಆಗತ್ತದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ
ಕುದುರೆ ಮೇಲೆ ಉಪೇಂದ್ರ
ಅದು ಸಾಮಾನ್ಯ ಕುದುರೆಯಲ್ಲ. ಎರಡು ಕೊಂಬಿರುವ ಕುದುರೆ. ಒಂದು ರೀತಿಯಲ್ಲಿ ಅದು ಕೆರಿಬಿಯನ್ಸ್ ಕಥೆಯಲ್ಲಿ ಬರುವಂತಹ ಕುದುರೆ. ಹಾಗಾಗಿ ಅದು ಆ ಕಾಲದ ಕಥೆಯಾ ಅಂತ ಕುತೂಹಲ ಮೂಡಿಸಬಹುದು. ಕುದುರೆ ಕಾಲದ ಸಂಕೇತ, ಕೋಣನ ಕೊಂಬು ಕಾಲನ ಸಂಕೇತ. ಹಾಗಾಗಿ ಹುಟ್ಟು ಸಾವಿನ ಬಗೆಗಿನ ಸಿನಿಮಾ ಇರಬಹುದಾ? ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ಕಲ್ಕಿಯ ಕೊನೆಯ ಅವತಾರ ಬಿಳಿ ಕುದುರೆ ಏರಿ ಬರುವುದು. ಆ ಅವತಾರದ ಲಿಂಕ್ ಏನಾದ್ರೂ ಕಥೆಯಲ್ಲಿ ಇರಬಹುದು. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್
ಐದು ಭಾಷೆಗಳಲ್ಲಿ ಚಿತ್ರ
ಪೋಸ್ಟರ್ ನಲ್ಲಿಯೇ ಐದು ಭಾಷೆಗಳನ್ನು ಬಳಸಿಕೊಂಡು ಒಂದು ವಾಕ್ಯವನ್ನು ಸೃಷ್ಟಿಸಿದ್ದಾರೆ ಉಪೇಂದ್ರ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿಸಿ ಅವರು ಬರೆದಿರುವ ವಾಕ್ಯ ‘’ಇವನು ಯಾವಾಗ ಬರ್ತಾನೋ ಗೊತ್ತಿಲ್ಲ, ಆದರೆ, ನಿಶ್ಚಿತವಾಗಿ ಬಂದೇ ಬರ್ತಾನೆ” ಎನ್ನವ ಅರ್ಥ ಬರುತ್ತದೆ. ಈ ಪದಗಳ ಹಿಂದಿರುವ ಅರ್ಥವನ್ನು ಗಮನಿಸಿದರೆ, “ಸಾವು ಯಾವಾಗ ಬರತ್ತೋ ಗೊತ್ತಿಲ್ಲ. ಆದರೆ, ಯಾವತ್ತೋ ಒಂದು ದಿನ ನಿಶ್ಚಿತಾಗಿಯೂ ಅದು ಬರುತ್ತದೆ” ಎಂಬ ಸಂದೇಶವನ್ನು ಈ ಸಿನಿಮಾ ಸಾರಲಿದೆಯಾ, ನೋಡಬೇಕು. ಕೋಣನ ಕೊಂಬು ಕೂಡ ಈ ವಾಕ್ಯಕ್ಕೆ ಸಾಥ್ ಕೊಡುತ್ತದೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ
ಅಳಿದುಳಿದ ಅವಶೇಷಗಳು
ಪೋಸ್ಟರ್ ನಲ್ಲಿ ಮಸೀದಿ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ. ನಶಿಸಿದ ನಾಗರೀಕತೆ ಮತ್ತು ಆಧುನಿಕತೆಯ ಸವಾಲುಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿರಬಹುದಾ ಎಂಬ ಅನುಮಾನವನ್ನು ಈ ಪೋಸ್ಟರ್ ಹುಟ್ಟು ಹಾಕುತ್ತದೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರದಲ್ಲಿ ನಾಯಕ ಧರೆಗೆ ಬರುತ್ತಾನಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ.