ಬೆಂಗಳೂರು: ಹಾವೇರಿಯಲ್ಲಿ (Haveri) ಚಲಿಸುತ್ತಿದ್ದ ಸಾರಿಗೆ ಬಸ್‍ನಿಂದ ಬಾಲಕಿಯೊಬ್ಬಳು ಬಿದ್ದು ಸಾವಿಗೀಡಾದ ಪ್ರಕರಣ ರಾಜ್ಯದಲ್ಲಿ (Karnataka) ಮತ್ತೆ ಮರುಕಳಿಸದಂತೆ ಸಾರಿಗೆ ನಿಗಮದಿಂದ (Transport Corporation) ಹೊಸ ಆದೇಶ ಜಾರಿಯಾಗಿದೆ.
Advertisement
ಬಸ್ (Bus) ಸಂಚಾರಕ್ಕೂ ಮುನ್ನ ಬಾಗಿಲು ಮುಚ್ಚಿರುವುದು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ನಿರ್ವಾಹಕರ ಸೂಚನೆ ಬಳಿಕವೇ ವಾಹನವನ್ನು ಚಾಲಕರು ಚಾಲನೆ ಮಾಡಬೇಕು. ಫುಟ್ ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸೂಚನೆ ಕೊಡಬೇಕು. ಬಸ್ ನಿಲ್ದಾಣ ತಲುಪುವ ಮುನ್ನ ಬಾಗಿಲನ್ನು ತೆರೆಯಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಸೂಚನೆಗಳನ್ನು ಸಾರಿಗೆ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಗಮ ಆದೇಶ ಹೊರಡಿಸಿದೆ. ಇದನ್ನೂ ಓದಿ: ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು
Advertisement
Advertisement
ಹಾವೇರಿಯಲ್ಲಿ 14 ವರ್ಷದ ಮಧು ಕುಂಬಾರ ಎಂಬ ಬಾಲಕಿ ಸೋಮವಾರ ಶಾಲೆಗೆ ತೆರಳುವ ವೇಳೆ ಆಯತಪ್ಪಿ ಬಸ್‍ನಿಂದ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಳು. ಇದನ್ನೂ ಓದಿ: ಗಂಡ ಬೇರೆ ಮನೆಮಾಡದ್ದಕ್ಕೆ ತವರಿಗೆ ಕರೆಸಿ ಅತ್ತೆಯನ್ನೇ ಕೊಂದ ಸೊಸೆ!