– ಪತಿ ಕುಟುಂಬಸ್ಥರಿಂದ ಗಂಭೀರ ಆರೋಪ
ಬೆಳಗಾವಿ: ಪತಿ (Husband) ಹಾಗೂ ಅತ್ತೆಯ ಮೇಲೆ ಸೊಸೆಯೊಬ್ಬಳು ಹಲ್ಲೆ ಮಾಡಿಸಿ ಅತ್ತೆಯನ್ನು ಕೊಲ್ಲಿಸಿದ ಪ್ರಕರಣ ಬೈಲಹೊಂಗಲದಲ್ಲಿ (Bailhongal) ನಡೆದಿದೆ.
Advertisement
ಮೃತಳನ್ನು ಮಹಾಬೂಬಿ ಯಾಕೂಶಿ (53) ಎಂದು ಗುರುತಿಸಲಾಗಿದೆ. ಮೇಹರೂಣಿ ಯಾಕೂಶಿ ಹಲ್ಲೆ ಮಾಡಿಸಿದ ಮಹಿಳೆ ಎಂದು ತಿಳಿದು ಬಂದಿದೆ. ಗಂಡ ಸುಬಾನ್ ಬೇರೆ ಮನೆ ಮಾಡಲಿಲ್ಲ ಎಂದು ಪತ್ನಿ (Wife) ಈ ಕೃತ್ಯ ಎಸಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: Bomb Threatː ಬೆಂಗಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ..!
Advertisement
Advertisement
ಮೇಹರೂಣಿ ಯಾಕೂಶಿ, ಪತಿ ಬೇರೆ ಮನೆ ಮಾಡಲಿಲ್ಲ ಎಂದು ಮನೆ ತೊರೆದು ತವರು ಮನೆಗೆ ತೆರಳಿದ್ದಾಳೆ. ಸ್ವಲ್ಪ ದಿನಗಳ ಬಳಿಕ ಅತ್ತೆ ಹಾಗೂ ಪತಿಯನ್ನು ತನ್ನ ತವರು ಮನೆಗೆ ಕರೆಸಿದ್ದಾಳೆ. ಈ ವೇಳೆ ತನ್ನ ಇಬ್ಬರೂ ಸಹೋದರರೊಂದಿಗೆ ಸೇರಿ ಅತ್ತೆ ಹಾಗೂ ಪತಿಯ ಮೇಲೆ ರಾಡ್‍ನಿಂದ ದಾಳಿ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.
Advertisement
ಮೇ 22ರಂದು ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೂರು ವರ್ಷದ ಹಿಂದೆ ಮೇಹರೂಣಿ ಮತ್ತು ಸುಬಾನ್ ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಬಳಿಕ ಬೇರೆ ಮನೆ ಮಾಡುವಂತೆ ಗಂಡನೊಂದಿಗೆ ಜಗಳ ಆಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರನ್ನು ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ