ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಹೈಲೈಟ್ಸ್ ಏನು?
* ಸಂಶೋಧನೆ ಮತ್ತ ಅವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ.
* ದೇಶದಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ನಿಧಿ ಬಿಡುಗಡೆ.
* ಪ್ರತ್ಯೇಕ ಸಂಶೋಧನೆಗೆ ಸಂಬಂಧಪಟ್ಟ ಸಚಿವಾಲಯದಿಂದ ಪ್ರೋತ್ಸಾಹ ಧನ.
Advertisement
A New National Education Policy would bring major changes in both school and higher education, usher in better governance systems and give greater focus on research and innovation: FM @nsitharaman
➡️https://t.co/TbnalirDaa #BudgetForNewIndia #Budget2019 pic.twitter.com/8LkP5QWFXY
— PIB India (@PIB_India) July 5, 2019
Advertisement
* 2019-20 ಆರ್ಥಿಕ ವರ್ಷದಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿಗಾಗಿ 400 ಕೋಟಿ ರೂ. ಅನುದಾನ.
* ಭಾರತದಲ್ಲಿ ಶಿಕ್ಷಣ (Study in India) ಎನ್ನುವಂತೆ ವಿದೇಶಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ದೇಶಕ್ಕೆ ಕರೆತರುವುದು, ಕಾನೂನುಗಳ ಸರಳೀಕರಣ
Advertisement
* ಖೇಲೋ ಇಂಡಿಯಾ ಸ್ಕೀಮ್ ಗೆ ಆರ್ಥಿಕ ನೆರವು ನೀಡುವುದು.
* ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ, ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಯುವ ಆಟಗಾರರನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು.
* ಯುವಕರ ವಿದ್ಯಾರ್ಹತೆ, ಕೌಶಲ್ಯ, ಸಾಮಥ್ರ್ಯಕ್ಕನುಗುಣವಾಗಿ ಸಂಬಂಧಿಸಿದ ವಲಯಗಳಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಉದ್ಯೋಗಿಗಳನ್ನಾಗಿ ಬದಲಿಸುವುದು. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಸೌಲಭ್ಯ ಕಲ್ಪಿಸುವುದು. AI, IoT, Big Data, 3D Printing, Virtual Reality and Robotics ಸಂಬಂಧಿಸಿದ ವಿಷಯಗಳಲ್ಲಿ ತರಬೇತಿ ಸಿಗಲಿದೆ.
Advertisement
* ಕೆಳಮಟ್ಟದಲ್ಲಿರುವ ಕಾರ್ಮಿಕ ವಲಯವನ್ನು ಮೇಲ್ದರ್ಜೆಗೆ ತರುವುದು.
* ಸ್ಟಾರ್ಟ್‍ಅಪ್ ಯೋಜನೆಗಳ ಮಾಹಿತಿಗಾಗಿ ಡಿಡಿ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳ ಪ್ರಸಾರ.
*2020-25ರರೆಗೆ ಸ್ಟ್ಯಾಂಡ್-ಅಪ್ ಇಂಡಿಯಾ ಸ್ಕೀಮ್ ಇರಲಿದೆ. ಈ ಯೋಜನೆಯ ಫಲಾನುಭವಿಗಳಿಗೆ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ.