– ರಾಜಭವನಕ್ಕೆ ಸಚಿವರ ಪಟ್ಟಿ ರವಾನೆ
ಬೆಂಗಳೂರು: 10 ಜನ ನೂತನ ಸಚಿವರ ಪಟ್ಟಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ರಿಲೀಸ್ ಮಾಡಿದ್ದು, ಲಿಸ್ಟ್‌ನಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಟಾಪ್‍ನಲ್ಲಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ನೂತನ ಸಚಿವರ ಅಧಿಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದ ಮಹೇಶ್ ಕುಮಟಹಳ್ಳಿ ಅವರನ್ನು ಬಿಟ್ಟು 10 ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ನೀಡಲಾಗಿದೆ. ಈ ಮೂಲಕ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ನಾರಾಯಣಗೌಡ ಹಾಗೂ ಶ್ರೀಮಂತ್ ಪಾಟೀಲ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್
Advertisement
Advertisement
ರಾಜಭವನದಲ್ಲಿ ನಾಳೆ ನೂತನ ಸಚಿವ ಪ್ರಮಾಣ ವಚನ ನಡೆಯುವ ಹಿನ್ನೆಲೆಯಲ್ಲಿ ರಾಜಭವನದ ಹೊರಗೆ ಸಿದ್ಧತೆ ಪ್ರಾರಂಭವಾಗಿದೆ. ರಾಜಭವನದ ಸುತ್ತ ಬ್ಯಾರಿಗೇಡ್ ಅಳವಡಿಸಲಾಗುತ್ತಿದೆ. ಎಲ್‍ಇಡಿ ಪರದೆ ಅಳವಡಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದಾರೆ.
Advertisement
ಸಿಎಂ ಯಡಿಯೂರಪ್ಪ ಅವರು ಕಳುಹಿಸಿದ ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್‍ನಲ್ಲಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ನಂಬರ್ 2 ಸ್ಥಾನದಲ್ಲಿದ್ದಾರೆ. ರಾಜಭವನಕ್ಕೆ ಕಳುಹಿಸಿದ ಪಟ್ಟಿಯಲ್ಲಿ ನಂಬರ್ ಗೇಮ್ ನಡೆದಿ ಎಂಬ ಮಾತುಗಳು ಕೇಳಿ ಬಂದಿದೆ. ಇದನ್ನೂ ಓದಿ: 10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್
Advertisement
ಆಪರೇಷನ್ ಕಮಲದ ನಂಬರ್ ಬರೀ 8 ಇದ್ದಾಗ ರಮೇಶ್ ಜಾರಕಿಹೊಳಿ ಟಾಪ್ ಲೀಡರ್. ಆದರೆ 8 ನಂಬರ್ ಇಟ್ಕೊಂಡು ಸರ್ಕಾರ ಬೀಳಿಸಲು ಆಗಿರಲಿಲ್ಲ. ಆಗ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರಿನ 4 ಶಾಸಕರ ನೇತೃತ್ವ ವಹಿಸಿದ್ದರು. ಬೆಂಗಳೂರಿನ 4 ನಂಬರ್ ಸಿಕ್ಕಿದ್ದರಿಂದಲೇ ಆಪರೇಷನ್ ಕಮಲ ಸಕ್ಸಸ್ ಆಗಿತ್ತು. ಆ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರು ಎಸ್.ಟಿ.ಸೋಮಶೇಖರ್ ಅವರನ್ನು ನಂಬರ್ 1 ಸ್ಥಾನಕ್ಕೇರಿಸಿ, ರಮೇಶ್ ಜಾರಕಿಹೊಳಿ ಅವರನ್ನು ನಂಬರ್ 2 ಸ್ಥಾನಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಪ್ರತ್ಯೇಕವಾಗಿ ಬಂದ ಆನಂದ್ ಸಿಂಗ್ ಅವರಿಗೆ 3ನೇ ಸ್ಥಾನ, ಸುಧಾಕರ್ ಅವರಿಗೆ 4 ಸ್ಥಾನ ಕೊಡಲಾಗಿದೆ. ನಂತರ ಟೀಂ ಆಧಾರದ ಮೇಲೆ ಸ್ಥಾನ ಕೊಟ್ಟು ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಲಾಗಿದೆ ಎನ್ನಲಾಗಿದೆ.