ಕಳೆದ ವಾರವಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada) ಫಿನಾಲೆ ಮುಗಿಸಿಕೊಂಡಿದೆ. ಬಿಗ್ ಬಾಸ್ ಗೆದ್ದವರು ಮತ್ತು ಎಲಿಮಿನೇಟ್ ಆದವರು ಇನ್ನೂ ವಾಹಿನಿಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಅಷ್ಟರಲ್ಲಿ ಬಿಗ್ ಬಾಸ್ ಮನೆ (House) ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ರೆಡಿಯಾಗಿದೆ. ಅಂದರೆ, ಬಿಗ್ ಬಾಸ್ ಮನೆಗೆ ಹೊಸ ರೂಪ ಕೊಡುವಂತಹ ಕೆಲಸ ನಡೆಯುತ್ತಿದೆ.
ಬಿಗ್ ಬಾಸ್ ಮನೆಗೆ ಹೊಸ ರೂಪ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ಉತ್ತರವಿದೆ. ಬಿಗ್ ಬಾಸ್ ಒಟಿಟಿ (OTT) ಸೀಸನ್ 2 ನಡೆಸಲು ವಾಹಿನಿಯು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಒಟಿಟಿ ಸೀಸನ್ ಮೊದಲು ಮಾಡಿ, ನಂತರ ಟಿವಿಗಾಗಿ ಬಿಗ್ ಬಾಸ್ ನಡೆಸಲಾಗಿತ್ತು. ಈ ಬಾರಿ ಉಲ್ಟಾ ಆಗಿದೆ.
ಒಟಿಟಿ ಸೀಸನ್ ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಕಂಟೆಸ್ಟೆಂಟ್ ಯಾರೆಲ್ಲ ಇರಬೇಕು ಎನ್ನುವ ಲೆಕ್ಕಾಚಾರ ಕೂಡ ಹಾಕಲಾಗುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೆಸರುಗಳು ಹರಿದಾಡುತ್ತಿವೆ. ಕೆಲವರು ಕೆಲವರ ಹೆಸರನ್ನೂ ಸಜೆಸ್ಟ್ ಮಾಡುತ್ತಿದ್ದಾರೆ.
ಸದ್ಯಕ್ಕೆ ಬಣ್ಣ ಬಳೆಯುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಅಧಿಕೃತವಾಗಿ ವಾಹಿನಿಯಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಜನರಂತೂ ಸಖತ್ ತಲೆ ಕೆಡಿಸಿಕೊಂಡು ಕೂತಿದ್ದಾರೆ.