ನವದೆಹಲಿ: ಈಗಿನ ತೆರಿಗೆ ಹೊರೆ ಆಗಿದ್ದು, ತೆರಿಗೆ ಇಳಿಸಬೇಕು ಎನ್ನುವ ಕೂಗು ಕೇಳಿ ಬಂದ ಬೆನ್ನಲ್ಲೇ ಸರ್ಕಾರ ನೇಮಿಸಿದ ಸಮಿತಿಯೊಂದು ಟ್ಯಾಕ್ಸ್ ಇಳಿಕೆ ಸಂಬಂಧ ಶಿಫಾರಸು ಮಾಡಿದೆ. ಈ ಸಮಿತಿಯ ಶಿಫಾರಸನ್ನು ಸರ್ಕಾರ ಜಾರಿಗೆ ತಂದಲ್ಲಿ ಮಧ್ಯಮ ವರ್ಗಕ್ಕೆ ರಿಲೀಫ್ ಸಿಗಲಿದೆ.
ಶಿಫಾರಸಿನಲ್ಲಿ ಏನಿದೆ?
ಇಲ್ಲಿಯವರೆಗೆ ನಾಲ್ಕು ಹಂತದ ತೆರಿಗೆ ಇತ್ತು. ಈಗ 5 ಹಂತದ ಸ್ಲ್ಯಾಬ್ ಮಾಡುವಂತೆ ಶಿಫಾರಸು ಮಾಡಲಾಗಿದೆ. 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 2.50 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಮಧ್ಯಂತರ ಬಜೆಟ್ ನಲ್ಲಿ ತಿಳಿಸಿದಂತೆ ರಿಬೇಟ್ ನೀಡಲಾಗಿದೆ. 5 ರಿಂದ 10 ಲಕ್ಷ ರೂ.ವರೆಗೆ ಶೇ.10 ತೆರಿಗೆ, 10 ಲಕ್ಷ ರೂ.ದಿಂದ 20 ಲಕ್ಷ ರೂ.ವರೆಗೆ ಶೇ.20, 20 ಲಕ್ಷ ರೂ.ಯಿಂದ 2 ಕೋಟಿ ರೂ.ಗೆ ಶೇ.30 ಮತ್ತು 2 ಕೋಟಿ ರೂ.ಗೆ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ.35 ರಷ್ಟು ತೆರಿಗೆಯನ್ನು ವಿಧಿಸುವಂತೆ ಶಿಫಾರಸು ಮಾಡಿದೆ.
Advertisement
Advertisement
ಈಗ 10 ಲಕ್ಷ ರೂ. ನಿಂದ 20 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿ ಶೇ.30 ರಷ್ಟು ತೆರಿಗೆ ಪಾವತಿಸಬೇಕಿದೆ. ಸಮಿತಿ ಶಿಫಾರಸ್ಸು ಜಾರಿಯಾದರೆ ಶೇ.20 ರಷ್ಟು ಮಾತ್ರ ತೆರಿಗೆ ಕಟ್ಟಬೇಕು. ಹೀಗಾಗಿ ಶೇ.10 ರಷ್ಟು ತೆರಿಗೆ ಇಳಿಕೆಯಾಗಲಿದೆ. ಇದನ್ನೂ ಓದಿ: ನಿಮ್ಮ ಆದಾಯ 14.50 ಲಕ್ಷ ಇದ್ದರೂ ನೀವು ತೆರಿಗೆ ಪಾವತಿಸಬೇಕಿಲ್ಲ!
Advertisement
Advertisement
2.5 ಲಕ್ಷ ರೂ.ದಿಂದ 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿ ಸದ್ಯ ಶೇ.5 ತೆರಿಗೆ ಪಾವತಿಸುತ್ತಾನೆ. ಸಮಿತಿಯ ಶಿಫಾರಸ್ಸು ಜಾರಿಯಾದ್ರೆ ಆತ ಶೇ.10 ತೆರಿಗೆ ಪಾವತಿಸಬೇಕು. ಇಲ್ಲಿ 5 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿ ಸರ್ಕಾರದ ರಿಬೇಟ್ ಲಾಭ ಪಡೆಯಬಹುದು.