ಧಾರವಾಡ: ಕೇವಲ ನಾಲ್ಕು ಗೊಡೆಗಳ ಮಧ್ಯೆ ಕುಳಿತು ಇದೇ ನನ್ನ ಜಗತ್ತು ಎಂದುಕೊಳ್ಳಬಾರದು, ಅದರಿಂದ ಹೊರಬಂದು ಕೌಶಲ್ಯಗಳನ್ನ ಪಡೆಯಬೇಕು ಎಂದು ಕೌಶಾಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನುಡಿದ್ರು.
ಧಾರವಾಡದ ಸುವರ್ಣಾ ಕಾಲೇಜ್‍ನಲ್ಲಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನ ಮಂತ್ರಿಗಳು ಪ್ರತಿನಿತ್ಯ ಮಾತನಾಡುವಾಗಲೂ ಅವರಲ್ಲೊಂದು ಹೊಸ ಕಲ್ಪನೆ ಅಥವಾ ಯೋಜನೆ ಇರುತ್ತೆ. ಆ ಕಲ್ಪನೆಯನ್ನಿಟ್ಟುಕೊಂಡು ಇವತ್ತು ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಅದರ ಲಾಭ ಪಡೆದುಕೊಳ್ಳಬೇಕು ಅಂತ ಅವರು ಈ ಸಂದರ್ಭದಲ್ಲಿ ವಿನಂತಿಸಿದ್ರು.
Advertisement
Advertisement
ಕೇಂದ್ರ ಸರ್ಕಾರ ಕೌಶಲಾಭಿವೃದ್ಧಿ ಯೋಜನೆ ಅಡಿಯಲ್ಲಿ ಮೂರೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಜನರಿಗೆ ಉದ್ಯೋಗ ಅವಕಾಶ ನೀಡಬೇಕು ಹಾಗೂ ನಾವು ಅವರಿಗೆ ತಲುಪುವ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದರು.
Advertisement
ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ಬೇಕಾದರೆ ಸ್ಕಿಲ್ ಡೆವೆಲಪಮೆಂಟ್ ಕೇಂದ್ರಗಳಿವೆ. ಅಲ್ಲಿ ಕೂಡ ಹೋಗಿ ತರಬೇತಿಗಳನ್ನು ಪಡೆದುಕೊಳ್ಳಬಹುದು. ಸುಮಾರು 18 ದೇಶಗಳ ಜೊತೆ ತಂತ್ರಜ್ಞಾನದ ತರಬೇತಿಗಳನ್ನು ಪಡೆದುಕೊಳ್ಳಬಹುದು. ಇತ್ತೀಚೆಗೆ ಸ್ವಿಡನ್ ಹಾಗೂ ಜಪಾನ್ ದೇಶ ಕೆಲಸಗಾರರ ಬೇಡಿಕೆ ಇಟ್ಟಿವೆ. ಸುಮಾರು 20 ಸಾವಿರ ಮಹಿಳೆಯರಿಗೆ ತರಬೇತಿ ಜೊತೆ ಕೆಲಸ ನೀಡುವುದಾಗಿ ಹೇಳಿದ್ದವು. ಹೀಗೆ ಇಂದು ಅಂತರಾಷ್ಟ್ರೀಯ ಮಟಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ನಾವು ಈಗಿರುವ ತಂತ್ರಜ್ಞಾನವನ್ನ ಮಾತ್ರ ಬಳಸುತ್ತಿದ್ದೇವೆ. ಬದಲಾಗಿ ಮುಂಬರುವ ತಂತ್ರಜ್ಞಾನ ಬಳಸುವ ಬಗ್ಗೆ ತಯಾರಾಗಬೇಕು ಅಂದ್ರು.
Advertisement
ಇಂಗ್ಲಿಷ್ ಕಲಿತರೆ ಮಾತ್ರ ನಮ್ಮ ಬದುಕು ಅಂತ ತುಂಬಾ ಜನರಿಗೆ ಅನಿಸಿತ್ತು. ಒಟ್ಟಿನಲ್ಲಿ ದೇಶದ ಜನತೆಗೆ ಹೊಸ ಬದುಕಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ ಅಂದ್ರು.