ಜೂನ್ 1 ರಂದು ಸುದೀಪ್ (Sudeep) ನಟನೆಯ ಹೊಸ ಸಿನಿಮಾದ (New Movie) ಟೀಸರ್ ರಿಲೀಸ್ ಆಗಲಿದೆ. ಟೀಸರ್ (Teaser) ರಿಲೀಸ್ ಗೂ ಮುನ್ನ ಈ ಸಿನಿಮಾದ ಬಗ್ಗೆ ಅಚ್ಚರಿ ಸುದ್ದಿಗಳು ಹೊರ ಬಂದಿದ್ದು, ಈ ಸಿನಿಮಾವನ್ನು ತಮಿಳು (Tamil) ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಹೊಸ ಹುಡುಗ ವಿಜಯ್ (Vijay) ಎನ್ನುವವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ.
Advertisement
ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.
Advertisement
Advertisement
ಸ್ವತಃ ಸುದೀಪ್ ಅವರೇ ಜೂನ್ 1ನೇ ತಾರೀಖಿನಂದು ಹೊಸ ಸಿನಿಮಾದ ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದರು. ಹೊಸ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೂ ಆರು ದಿನ ಮುಂಚೆಯೇ ಮೊನ್ನೆ ಆ ಸಿನಿಮಾದ ಸಣ್ಣ ಸುಳಿವು ಕೊಟ್ಟಿದ್ದರು. ಆ ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕ್ ರಿಲೀಸ್ ಮಾಡುವ ಮೂಲಕ ತಿಳಿಸಿದ್ದರು. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ
Advertisement
ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು (Tamil) ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ಸುದೀಪ್ ಟೀಸರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿತ್ತು ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿದ್ದರು.
ಈ ಹಿಂದೆಯಷ್ಟೇ ತಾವು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ಕಿಚ್ಚ ಸುದೀಪ್ (Sudeep) ಬಹಿರಂಗ ಪಡಿಸಿದ್ದರು. ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಶುರುವಾಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ‘ಬಿಲ್ಲ ರಂಗ ಬಾಷಾ’ (Billa Ranga Basha) ಮೊದಲು ಮೂಡಿ ಬರಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನ ವಿಜಯ್ ನಿರ್ದೇಶನದ ಚಿತ್ರ ತಯಾರಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.