ನವದೆಹಲಿ: ಭಾರತಕ್ಕೆ ಹಣ ಬೇಕಾಗಿಲ್ಲ ಎಂದು ಹೇಳುವ ಮೂಲಕ ಭಾರತದ ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅವರ ಹೇಳಿಕೆಗೆ ಗರಂ ಆಗಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಹಣಕ್ಕಾಗಿ ಪಾಕಿಸ್ತಾನ ಮತ್ತು ಇಂಡಿಯಾ ಮತ್ತೆ ದ್ವಿಪಕ್ಷೀಯ ಸರಣಿ ಆಡಬೇಕು ಎಂದು ಶೋಯೆಬ್ ಹೇಳಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ಭಾರತಕ್ಕೆ ಹಣ ಬೇಕಾಗಿಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಭಾರತಕ್ಕೆ ಈಗ ಹಣದ ಅವಶ್ಯಕತೆಯಿಲ್ಲ. ಆದ್ದರಿಂದ ಈ ರೀತಿಯ ಸರಣಿಯನ್ನು ನಡೆಸುವುದು ಬೇಡ. ಈಗ ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯಿರಿ. ಜೀವಕ್ಕೆ ಕುತ್ತು ತರುವ ಕೆಲಸಕ್ಕೆ ಯಾಕೆ ಕೈಹಾಕಬೇಕು. ಈ ವಿಚಾರದಲ್ಲಿ ನಮಗೆ ಯಾರ ಸಲಹೆಯು ಬೇಕಾಗಿಲ್ಲ. ನಮ್ಮಲ್ಲಿ ಜನರನ್ನು ಸುರಕ್ಷಿತವಾಗಿ ಇಡಲು ಅಧಿಕಾರಿಗಳು ಬಹಳ ಕಷ್ಟಪಡುತ್ತಿದ್ದಾರೆ ಅವರಿಗೆ ಮನೆಯೊಳಗೆ ಇದ್ದು ಸಹಕರಿಸೋಣ. ಈ ರೀತಿಯ ವಿಚಾರಗಳನ್ನು ಹೇಳುವುದು ಸುಲಭ. ಆದರೆ ಆಯೋಜನೆ ಮಾಡುವುದು ಕಷ್ಟ ಎಂದು ಕಪಿಲ್ ಅಖ್ತರ್ ಹೇಳಿಕೆ ತಿರುಗೇಟು ನೀಡಿದ್ದಾರೆ.
Advertisement
Advertisement
ಅಖ್ತರ್ ಹೇಳಿದ್ದೇನು?
ಈ ಬಿಕ್ಕಟ್ಟಿನ ಸಮಯದಲ್ಲಿ ನಾನು ಇಂಡೋ-ಪಾಕ್ ಮೂರು ಪಂದ್ಯಗಳ ಸರಣಿಯನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಇದರಲ್ಲಿ ಯಾವ ದೇಶ ಗೆದ್ದರೂ ಜನರು ಅಸಮಾಧಾನಗೊಳ್ಳುವ ಅವಶ್ಯಕತೆಯಿಲ್ಲ. ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ನಾವು ಸಂತೋಷಪಡುತ್ತೇವೆ. ಹಾಗೇಯೆ ಬಾಬರ್ ಅಜಮ್ ಶತಕ ಬಾರಿಸಿದರೆ ನೀವು ಸಂತೋಷಪಡಿ. ಒಟ್ಟಿನಲ್ಲಿ ಮೈದಾನದಲ್ಲಿ ಏನೇ ಆಗಲಿ ಎರಡೂ ತಂಡಗಳು ಕೊನೆಯಲ್ಲಿ ವಿಜೇತವಾಗಿರುತ್ತವೆ ಎಂದು ತಿಳಿಸಿದ್ದರು.
ಇಂಡೋ-ಪಾಕ್ ಪಂದ್ಯಗಳನ್ನು ಹೆಚ್ಚು ವೀಕ್ಷಕರನ್ನು ಸೆಳೆಯುತ್ತವೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಉಭಯ ದೇಶಗಳು ಪರಸ್ಪರ ಆಡಲಿವೆ. ಈ ಮೂಲಕ ಬರುವ ಎಲ್ಲಾ ಹಣವನ್ನು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಮತ್ತು ಪಾಕಿಸ್ತಾನ ಸರ್ಕಾರಕ್ಕೆ ಸಮಾನವಾಗಿ ಹಂಚಿಕೊಳ್ಳಲಿ ಎಂದು 44 ವರ್ಷದ ಶೋಯೆಬ್ ತಿಳಿಸಿದ್ದರು.