ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ ಎಂದು ಹೇಳುವ ಮೂಲಕ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.
ಭಾನುವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಡ್ಡಾ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಬೆಂಬಲಿಸದ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Advertisement
Advertisement
ಪ್ರಧಾನಿ ಮೋದಿ ಅವರು ಒಂದು ದೇಶದ ಪರಿಕಲ್ಪನೆಯನ್ನು ಅರಿತುಕೊಂಡಿದ್ದಾರೆ. ಒಂದು ದೇಶಕ್ಕೆ ಒಂದೇ ಸಂವಿಧಾನ, ಒಂದೇ ಚಿಹ್ನೆ ಎಂಬುದನ್ನು ಕಾಂಗ್ರೆಸ್‍ನವರು ಏಕೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ 370 ನೇ ವಿಧಿಯನ್ನು ತಾತ್ಕಾಲಿಕ ಎಂದು ಹೇಳುತ್ತದೆ. ಹಾಗಾದರೆ 370 ವಿಧಿ ಒಳ್ಳೆಯದೇ ಆಗಿದ್ದರೆ ಅದನ್ನು ಅವರು ಏಕೆ ಶಾಶ್ವತಗೊಳಿಸಲಿಲ್ಲ? ಕಾಂಗ್ರೆಸ್‍ನವರು ಒಂದು ಸಮಯದಲ್ಲಿ 400 ಜನ ಸಂಸದರನ್ನು ಹೊಂದಿದ್ದರು. ಅ ಸಮಯದಲ್ಲಿ ಅದನ್ನು ಏಕೆ ಶಾಶ್ವತಗೊಳಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.
Advertisement
370 ನೇ ವಿಧಿ ದೇಶಕ್ಕೆ ಮಾರಕ. ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಆದರೆ ಅದನ್ನು ಅವರು ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದರು. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಮುಖ್ಯ ಎಂದು ಜೆಪಿ ನಡ್ಡಾ ಕಿಡಿಕಾರಿದರು.
Advertisement
ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ನಂತರದಲ್ಲಿ, ಪಾಕಿನಿಂದ ಹೈದರಾಬಾದ್‍ನಂತಹ ನಗರಗಳಿಗೆ ಬಂದ ಜನರು ಅಲ್ಲಿ ರಾಜಕೀಯ ನಾಯಕರಾದರು, ಉತ್ತಮ ಭವಿಷ್ಯ ಕಟ್ಟಿಕೊಂಡರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲೇ ಇದ್ದ ಮೂಲ ನಿವಾಸಿಗಳು ಕೌನ್ಸಿಲರ್ ಆಗಲು ಕೂಡ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ 370 ನೇ ವಿಧಿ ಎಂದು ನಡ್ಡಾ ಬೇಸರ ವ್ಯಕ್ತಪಡಿಸಿದರು.
ಈಗ ಈ ಕೆಟ್ಟ ಪದ್ಧತಿ ರದ್ದಾಗಿದೆ ಈಗ ಯಾರು ಬೇಕಾದರೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೂ ಅಲ್ಲಿ ಚುನಾವಣೆಗೆ ನಿಲ್ಲಲು ಸ್ಥಾನ ಸಿಕ್ಕಿದೆ. ಭಾರತ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ 500 ರಾಜ್ಯಗಳನ್ನು ಒಂದು ಮಾಡಿದರು. ಆದರೆ ಕಾಶ್ಮೀರ ಒಂದನ್ನು ನೆಹರೂ ಅವರಿಗೆ ಬಿಟ್ಟುಕೊಟ್ಟು ತಪ್ಪು ಮಾಡಿದರು. ಅದೂ ಈಗ ಸಮಸ್ಯೆಯಾಗಿದೆ ಎಂದರು.
ಇದೇ ವೇಳೆ ಕೆಲವು ಟಿಡಿಪಿ ನಾಯಕರು ಬಿಜೆಪಿಗೆ ಸೇರ್ಪಡೆಯಾದ ವಿಚಾರದ ಬಗ್ಗೆ ಮಾತನಾಡಿದ ನಡ್ಡಾ, ಟಿಆರ್‍ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸರ್ವಾಧಿಕಾರಿ ಶೈಲಿಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ರಾವ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾತ್ರ ಗಮನ ಕೊಡುತ್ತಾರೆ ಎಂದು ಆರೋಪಿಸಿದ ಅವರು, ಟಿಆರ್‍ಎಸ್ ಸರ್ಕಾರವು ಎನ್‍ಡಿಎ ಸರ್ಕಾರದ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ, ಇದರಿಂದ ಜನರು ಅದರ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.