Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!

Latest

ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!

Public TV
Last updated: March 14, 2017 4:36 pm
Public TV
Share
2 Min Read
rape 1
SHARE

– ಸಹಾಯಕ್ಕಾಗಿ ಅಂಗಲಾಚಿದ್ರೂ ಯಾರೊಬ್ಬರೂ ಬರ್ಲಿಲ್ಲ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಯುವತಿಯೊಬ್ಬಳು ಕಾಮುಕರಿಂದ ಪಾರಾಗಲು ಬೆತ್ತಲೆಯಾಗಿ ಅಪಾರ್ಟ್‍ಮೆಂಟ್‍ನಿಂದ ಹಾರಿ ತನ್ನ ಮಾನ ಮತ್ತು ಪ್ರಾಣವನ್ನು ಉಳಿಸಿಕೊಂಡಿದ್ದಾಳೆ.

ಕಾಮುಕರಿಂದ ಯುವತಿ ಹೇಗೋ ತಪ್ಪಿಸಿಕೊಂಡು ಅಪಾರ್ಟ್‍ಮೆಂಟಿನ ಮೊದಲ ಮಹಡಿಯಿಂದ ಬೆತ್ತಲೆಯಾಗಿಯೇ ಹಾರಿ ಬಳಿಕ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೂ ಯಾರೋಬ್ಬರೂ ಆಕೆಯ ಸಹಾಯಕ್ಕೆ ಬಾರದಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

DELHI

ಏನಿದು ಪ್ರಕರಣ?: 23 ವರ್ಷದ ನೇಪಾಳದ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲು ಐವರು ಯುವಕರು ಮುಂದಾಗಿದ್ದರು. ಈ ಕಾಮುಕರಿಂದ ಪಾರಾಗಲು ಬೆಳಗ್ಗೆ 5.45ರ ವೇಳೆಗೆ ದೆಹಲಿಯ ಪಾಂಡವ ನಗರದ ಅಪಾರ್ಟ್‍ಮೆಂಟಿನ ಮೊದಲನೇ ಮಹಡಿಯಿಂದ ಹಾರಿದ್ದಾಳೆ. ಬಳಿಕ ರೋಡಿನಲ್ಲಿ ಬೆತ್ತಲೆಯಾಗಿಯೇ ನಡೆದುಕೊಂಡು ಜನರ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೆ ರೋಡಿನಲ್ಲಿ ಯಾರೊಬ್ಬರೂ ಆಕೆಗೆ ಸಹಾಯ ಮಾಡದೆ ಅಮಾನವೀಯತೆ ಮೆರೆದಿದ್ದಾರೆ.

ಕೊನೆಗೆ ಆಕೆ ರಿಕ್ಷಾವೊಂದನ್ನು ನಿಲ್ಲಿಸಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅಂತೆಯೇ ಆಟೋ ಚಾಲಕ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಈಕೆ ಆಟೋ ಚಾಲಕನ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದವರು ಆಕೆಯನ್ನೇ ನೋಡುತ್ತಿದ್ದರೇ ಹೊರತು ಆಕೆಗೆ ಬಟ್ಟೆ ಕೊಟ್ಟು ಮಾನ ಮುಚ್ಚಿಕೊಳ್ಳಲು ಸಹಾಯ ಮಾಡಲಿಲ್ಲ.

ಯುವತಿಯ ದೂರಿನ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಟ್ಟಡಿಂದ ಜಿಗಿದಿದ್ದ ಪರಿಣಾಮ ಕಾಲುಗಳಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ನಗರದ ಮುನಿರ್ಕಾ ಪ್ರದೇಶದಲ್ಲಿ ವಾಸವಾಗಿದ್ದಳು ಅಂತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

DELHI 1

ದೂರಿನಲ್ಲೇನಿತ್ತು?: ಗೆಳೆಯ ವಿಕಾಸ್ ಎಂಬ ಗೆಳೆಯ ಪಾರ್ಟಿಗೆ ಕರೆದಿದ್ದನು. ಹೀಗಾಗಿ ನಾನು ಪಾಂಡವ್ ನಗರಕ್ಕೆ ತೆರಳಿದ್ದೆ. ನಾನು ಆತನ ರೆಸಿಡೆನ್ಸಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಕಾಸ್‍ನ ಇಬ್ಬರು ಗೆಳೆಯರು ದಾರಿ ಮಧ್ಯೆ ಸಿಕ್ಕಿದ್ದರು. ನಾವು ಮೂವರು ಸೇರಿ ವಿಕಾಸ್ ಮನೆಗೆ ಹೋಗಿದ್ದೇವು. ಅದಾಗಲೇ ವಿಕಾಸ್ ಮನೆಯಲ್ಲಿ ಇಬ್ಬರು ಹಾಜರಿದ್ದರು. ಆದ್ರೆ ಈ ವೇಳೆ ನನಗೆ ಸ್ವಲ್ಪ ಕೆಲಸ ಇದೆ ಹೊರಗೆ ಹೋಗಿ ಬರ್ತೀನಿ ಅಂತಾ ವಿಕಾಸ್ ನನ್ನ ಜೊತೆ ಹೇಳಿ ಹೋಗಿದ್ದನು. ಈತ ಹೋದ ಬಳಿಕ ಉಳಿದ ಗೆಳೆಯರು ಸೇರಿ ಒತ್ತಾಯ ಮಾಡಿ ಆಲ್ಕೋಹಾಲ್ ಕುಡಿಸಿದ್ದಾರೆ. ಆ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣ ಸಂಬಂಧ ಆರೋಪಿಗಳಾದ ನವೀನ್ ಕುಮಾರ್, ಪ್ರತೀಕ್ ಕುಮಾರ್, ವಿಕಾಸ್ ಮೆಹ್ರಾ, ಸರ್ವ್‍ಜೀತ್ ಹಾಗೂ ಲಕ್ಷ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಕಾಲ್‍ಸೆಂಟರ್ ಉದ್ಯೋಗಿಗಳಾಗಿದ್ದಾರೆ. ಸದ್ಯ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್ ರೇಪ್), ಸೆಕ್ಷನ್ 323(ಕೈಯಿಂದ ಹಲ್ಲೆ), ಸೆಕ್ಷನ್ 506(ಜೀವ ಬೆದರಿಕೆ), ಸೆಕ್ಷನ್ 342 (ಅಕ್ರಮ ಬಂಧನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

TAGGED:arrestgangrapenepalian womennewdelhipublictvಗ್ಯಾಂಗ್‍ರೇಪ್ನವದೆಹಲಿನೇಪಾಳದ ಯುವತಿಪಬ್ಲಿಕ್ ಟಿವಿಬಂಧನ
Share This Article
Facebook Whatsapp Whatsapp Telegram

Cinema news

Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories

You Might Also Like

uttar pradesh couple
Court

33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಯುಪಿ ದಂಪತಿಗೆ ಮರಣದಂಡನೆ

Public TV
By Public TV
2 minutes ago
AI Teaching
Latest

PUBLiC TV Explained: ಶೈಕ್ಷಣಿಕ ಕಲಿಕೆಗೆ `AI ಪರಿಕರ’ ತರಲು ಸರ್ಕಾರ ಚಿಂತನೆ – ಇದು ಹೇಗೆ ಕಾರ್ಯನಿರ್ವಹಿಸುತ್ತೆ? 

Public TV
By Public TV
37 minutes ago
Hassan CMS Staff
Districts

3.40 ಕೋಟಿ ಹಣ ಎಟಿಎಂಗೆ ಹಾಕದೇ ವಂಚನೆ – ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ FIR

Public TV
By Public TV
1 hour ago
hubballi jail party
Dharwad

ಹುಬ್ಬಳ್ಳಿ ಜೈಲಿನಲ್ಲಿ ಕೈದಿಗಳ ಮೋಜು-ಮಸ್ತಿ; ಗುಂಡು, ತುಂಡು ಪಾರ್ಟಿ, ಗಾಂಜಾ ಮತ್ತಲ್ಲಿ ತೇಲಾಟ

Public TV
By Public TV
1 hour ago
Rahul chahar
Cricket

ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್-ಇಶಾನಿ ವಿಚ್ಛೇದನ – 4 ವರ್ಷಗಳ ದಾಂಪತ್ಯ ಅಂತ್ಯ

Public TV
By Public TV
2 hours ago
Nelamangala Toll
Latest

ಏ.1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?