ನವದೆಹಲಿ: ವಿಚಾರಣೆಗೆ ಒಂದು ತಿಂಗಳು ಕರೆದರೂ ನಾನು ಹಾಜರಾಗುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಎರಡನೇಯ ದಿನವಾದ ಇಂದು ಇಡಿ ಕಚೇರಿಗೆ ತೆರಳು ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಏನೂ ತಪ್ಪು ಮಾಡಿಲ್ಲ. ಹೀಗಾಗಿ ನಾನು ಹೆದರಲ್ಲ. ನಾನೇ ಇದರ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತಿಲ್ಲ. ನೀವು ಯಾಕೆ ಇಷ್ಟೊಂದು ಚಿಂತೆ ಮಾಡುತ್ತಿರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
Advertisement
Advertisement
ನಾನು ಯಾವ ತಪ್ಪನ್ನೂ ಮಾಡಿಲ್ಲ. ನಾನು ಏಕೆ ಹೆದರಬೇಕು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅಧಿಕಾರಿಗಳಿಗೆ ಕೂಡ ನಾನು ಸಹಕರಿಸುತ್ತಿದ್ದೇನೆ. ವಿಚಾರಣೆಗೆ ಅವರು ಒಂದು ತಿಂಗಳು ಬನ್ನಿ ಎಂದರೂ ನಾನು ಬರುತ್ತೇನೆ. ನನಗೆ ಯಾವ ಭಯವೂ ಇಲ್ಲ ಎಂದರು. ಈ ವೇಳೆ ಇಂದೇ ಈ ತನಿಖೆ ಮುಗಿಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದೂ ನನಗೆ ಗೊತ್ತಿಲ್ಲ ನೋಡೋಣ ಎಂದು ಹೇಳಿದರು.
Advertisement
ಶುಕ್ರವಾರ ಇಡಿ ಡಿಕೆಶಿ ಅವರನ್ನು ಸಂಜೆ 6 ಗಂಟೆಯಿಂದ ರಾತ್ರಿ 11.30 ವರಿಗೆ ತನಿಖೆ ಮಾಡಿತ್ತು. ನಂತರ ಮತ್ತೆ ಶನಿವಾರ 11 ಗಂಟೆಗೆ ಬರುವಂತೆ ಸೂಚಿಸಿತ್ತು. ಇಡಿ ಸೂಚನೆಯಂತೆ 11 ಗಂಟೆಗೆ ಬಂದ ಡಿಕೆಶಿ ಕೆಲವು ಅಪ್ತರ ಜೊತೆ ಇಡಿ ಕಚೇರಿಯಲ್ಲಿರುವ ಪೊಲೀಸ್ ಚೌಕಿಯೊಳಗೆ ಕುಳಿತು ಮಾತನಾಡಿದ್ದಾರೆ. ನಂತರ ಈಗ ಕೆಲವು ದಾಖಲೆಯ ಜೊತೆಗೆ ಇಡಿ ಕಚೇರಿಯೊಳಗೆ ತೆರಳಿದ್ದಾರೆ.