– 3,390 ಹೊಸ ಕೊರೊನಾ ಪ್ರಕರಣಗಳು ಪತ್ತೆ
– ಮಹಾರಾಷ್ಟ್ರ ಒಂದರಲ್ಲೇ 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು
ನವದೆಹಲಿ: ದಿನೇ ದಿನೇ ಕೊರೊನಾ ವೈರಸ್ ಹಾವಳಿ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 103 ಮಂದಿಯನ್ನು ಮಹಾಮಾರಿ ಬಲಿಪಡೆದಿದೆ. ಈವರೆಗೆ ಸುಮಾರು 1,886 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು, ಸೋಂಕಿತೆ ಸಂಖ್ಯೆ 56,342ಕ್ಕೆ ಏರಿಕೆಯಾಗಿದೆ.
Total number of #COVID19 positive cases in India rises to 56342 including 37916 active cases, 16539 cured/discharged, 1886 deaths and 1 migrated: Ministry of Health and Family Welfare pic.twitter.com/gg3b6aNJMi
— ANI (@ANI) May 8, 2020
Advertisement
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 3,390 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 16,539 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ 17,974 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 694 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ. ಧಾರಾವಿ, ಕೊಳಗೇರಿ ಪ್ರದೇಶಗಳಲ್ಲಿ ಗುರುವಾರ ಒಂದೇ ದಿನ 50ಕ್ಕೂ ಹೆಚ್ಚು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 783ಕ್ಕೆ ತಲುಪಿದೆ.
Advertisement
3,390 new #COVID19 positive cases and 103 deaths reported in last 24 hours in India. https://t.co/61FOJN0jPL
— ANI (@ANI) May 8, 2020
Advertisement
ಇತ್ತ ಗುಜರಾತ್‍ನಲ್ಲಿ ಕಳೆದ 24 ಗಂಟೆಯಲ್ಲಿ 29 ಮಂದಿ ಸಾವನ್ನಪ್ಪಿದ್ದು, ಈವರೆಗೆ ಕೊರೊನಾಗೆ ಮೃತಪಟ್ಟವರ ಸಂಖ್ಯೆ 425ಕ್ಕೆ ತಲುಪಿದೆ. ಅಲ್ಲದೇ ಈವರೆಗೆ ಒಟ್ಟು 7,013 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5,980 ಮಂದಿಗೆ ಈವರೆಗೆ ಸೋಂಕು ತಗುಲಿದ್ದು, 66 ಮಂದಿ ಸೋಂಕಿತರು ಮಹಾಮಾರಿ ಅಟ್ಟಹಾಸಕ್ಕೆ ಜೀವ ಕಳೆದುಕೊಂಡಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ 5,409 ಮಂದಿ ಈವರೆಗೆ ಕೊರೊನಾಗೆ ತುತ್ತಾಗಿದ್ದು, 37 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
Advertisement
ಕರ್ನಾಟಕದಲ್ಲಿ ಈವರೆಗೆ 705 ಮಂದಿಗೆ ಸೋಂಕು ತಗುಲಿದ್ದು, 30 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೇ 366 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಕೇರಳದಲ್ಲಿ 503 ಮಂದಿ ಸೋಂಕಿಗೆ ತುತ್ತಾಗಿದ್ದು, 4 ಸಾವನ್ನಪ್ಪಿದ್ದಾರೆ. ಸುಮಾರು 474 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ತಮಿಳುನಾಡಿನಲ್ಲಿ 580, ದೆಹಲಿಯಲ್ಲಿ 448, ಗುಜರಾತ್‍ನಲ್ಲಿ 388, ಮಧ್ಯಪ್ರದೇಶದಲ್ಲಿ 114 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ.