Bigg Boss: ತನಿಷಾ, ವರ್ತೂರು ಸಮ್‌ಥಿಂಗ್‌ ಸಮ್‌ಥಿಂಗ್‌ ಬಗ್ಗೆ ಸುದೀಪ್‌ ರಿಯಾಕ್ಷನ್

Public TV
1 Min Read
sudeep 2

ದೊಡ್ಮನೆಯಲ್ಲಿ ನಮ್ರತಾ-ಸ್ನೇಹಿತ್, ಕಾರ್ತಿಕ್-ಸಂಗೀತಾ, ಇಶಾನಿ-ಮೈಕಲ್ ಜೋಡಿಯ ಲವ್ ಟ್ರ್ಯಾಕ್ ಶುರುವಾಗಿರೋದು ಗೊತ್ತೇ ಇದೆ. ಇದರ ನಡುವೆ ನಿಧಾನವಾಗಿ ತನಿಷಾ ಮತ್ತು ವರ್ತೂರು ಸಂತೋಷ್ ಜೋಡಿಯಾಗುವ ಲಕ್ಷಣ ಕಾಣ್ತಿದೆ. ಇದನ್ನೆಲ್ಲಾ ಗಮನಿಸಿರೋ ಸುದೀಪ್ ಕೂಡ ತನಿಷಾ (Tanisha Kuppanda) ಹೆಸರು ಹೇಳಿ ವರ್ತೂರುಗೆ ಕಾಲೆಳೆದಿದ್ದಾರೆ. ಇದನ್ನೂ ಓದಿ:ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

Tanisha Kuppanda 4

ಈ ಶನಿವಾರ ದೊಡ್ಮನೆ ಸ್ಪರ್ಧಿಗಳಿಗೆ ಬೆಂಡೆತ್ತಿದ ಮೇಲೆ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಸಖತ್ ಆಗಿ ಕಿಚ್ಚ ಎಲ್ಲರ ಕಾಲೆಳೆದಿದ್ದಾರೆ. ಅದರಲ್ಲಿ ತನಿಷಾ- ವರ್ತೂರುಗೆ (Varthur Santhos) ತಮಾಷೆ ಮಾಡಿರೋದು ಎಲ್ಲರ ಗಮನ ಸೆಳೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ಮೂವಿ ಮಾಡಿದ್ರೆ ಆ ಚಿತ್ರಕ್ಕೆ ಏನು ಟೈಟಲ್ ಇರುತ್ತೆ ಎಂಬುದರ ಬಗ್ಗೆ ತೋರಿಸಲಾಗಿದೆ. ಸಿರಿ, ಭಾಗ್ಯಶ್ರೀ, ತುಕಾಲಿ ಸಂತೂಗೆ `ಇಬ್ಬರ ಹೆಂಡ್ತಿರ ಮುದ್ದಿನ ಪೊಲೀಸ್ ‘ಎಂದು ಪೋಸ್ಟರ್ ರಿಲೀಸ್ ಮಾಡಿ ರೇಗಿಸಿದ್ರೆ, ಇತ್ತ ತನಿಷಾ- ವರ್ತೂರು ಲವ್ವಿ ಡವ್ವಿ ಬಗ್ಗೆ ಪೋಸ್ಟರ್ ಮೂಲಕ ಪರೋಕ್ಷವಾಗಿ ಕಿಚ್ಚ (Sudeep) ಮಾತಾನಾಡಿದ್ದಾರೆ.

tanisha

ಬಳಿಕ ತನಿಷಾಗೆ ಮೊದಲೇ ಬೆಂಕಿ ಎಂದು ದೊಡ್ಮನೆಯಲ್ಲಿ ಹೆಸರಿಟ್ಟಿದ್ದಾರೆ. ಅದನ್ನೇ ಉಪಯೋಗಿಸಿಕೊಂಡು, ‘ಬೆಂಕಿಯ ಬಲೆ’ ಎಂದು ಟೈಟಲ್ ಕೊಟ್ಟು ತನಿಷಾ- ವರ್ತೂರು ಫೋಟೋ ಹಾಕಿದ್ದಾರೆ. ಇದನ್ನ ಎಲ್ಲರೂ ನೋಡ್ತಿದ್ದಂತೆ ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ವರ್ತೂರು, ನಾನು ಮಾಮೂಲಾಗಿ ಕ್ಲೋಸ್ ಆಗಿಯೇ ಇರುತ್ತೀನಿ ಎಂದು ತನಿಷಾ ಬಗ್ಗೆ ಹೇಳಿದ್ದಾರೆ. ಅದಕ್ಕೆ ಸುದೀಪ್, ಓಹೋ ನಿಮಗೆ ಕ್ಲೋಸ್ ಆಗಿರೋದೇ ಮಾಮೂಲಾ ಎಂದು ಕಾಲೆಳೆದಿದ್ದಾರೆ. ಕಿಚ್ಚನ ಮಾತಿಗೆ ಸ್ಪರ್ಧಿಗಳು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಬಳಿಕ ನಿಮ್ಮಿಬ್ಬರದ್ದೂ ಟೊಮೆಟೋ ಸಂಬಂಧ ಅಲ್ವಾ ಅಂತ ತಮಾಷೆ ಮಾಡಿದ್ದಾರೆ ಕಿಚ್ಚ.

ವರ್ತೂರು- ತನಿಷಾ ಜೊತೆಯಾಗಿ ಡ್ಯಾನ್ಸ್ ಮಾಡಿದ್ರೆ ನಾನು ಈ ವಿಚಾರ ಇಲ್ಲಿಗೆ ಬಿಡ್ತೀನಿ ಎಂದು ಕಿಚ್ಚ ಡಿಮ್ಯಾಂಡ್ ಮಾಡಿದ್ದಾರೆ. ಬಳಿಕ ಲವ್‌ ಆಗಿಹೋಯ್ತು ನಿನ್ನ ಮೇಲೆ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ.

Share This Article