ಗದಗ: ಬೆಳಗಾವಿನಲ್ಲಿ (Belagavi) ನಡೆಯುವ ಚಳಿಗಾಲ ಅಧಿವೇಶನ ವೇಳೆಗೆ ಹೊಸ ಸಿಎಂ (New CM) ನೇಮಕವಾಗಲಿದ್ದಾರೆ. ದಲಿತರಾಗ್ತಾರೋ, ಇನ್ನೊಬ್ಬರು ಆಗುತ್ತರೋ ಗೊತ್ತಿಲ್ಲ. ಅವರವರ ಗೊಂದಲದಲ್ಲಿ ಸರ್ಕಾರವೇ ಬಿದ್ದು ಹೋಗಬಹುದು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು (B. Sriramulu) ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಹೊಸ ಸಿಎಂ ಇರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ಆದರೂ ಅಚ್ಚರಿ ಇಲ್ಲ. ಕೊನೆಗಳಿಗೆಯಲ್ಲಿ ನಾನೇ ಸಿಎಂ ಆಗುತ್ತೇನೆ ಎಂದು ಖರ್ಗೆ ಬಂದರೂ ಬರಬಹುದು ಎಂದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಖರ್ಗೆ ಅವರೇ ಬರಬಹುದು. ಡಿಕೆ ಶಿವಕುಮಾರ್ (DK Shivakumar) ಮಾತು ಒಂದೊಂದು ರೀತಿ ಇವೆ. ಅವರ ಇವತ್ತಿನ ಮಾತು ಕೇಳಿದರೆ ಸನ್ಯಾಸಿ ಆಗ್ತಾರೇನೋ ಅನಿಸುತ್ತೆ. ಅವರಲ್ಲಿ ಜಿಗುಪ್ಸೆ ಆಗ್ತಿದೆ ಎಂದರು. ಇದನ್ನೂ ಓದಿ: ಸದ್ಯಕ್ಕೆ ದೆಹಲಿ ಪ್ರವಾಸವಿಲ್ಲ, ಅವಶ್ಯಕತೆ ಬಂದಾಗ ಹೋಗುತ್ತೇನೆ : ಸತೀಶ್ ಜಾರಕಿಹೊಳಿ
ಕಾಂಗ್ರೆಸ್‌ನಲ್ಲಿ ಸಚಿವರಾಗಬೇಕು ಅಂದ್ರೆ ಕಪ್ಪು ಹಣ (Black Money) ಕೊಟ್ಟರೇ ಮಾತ್ರ ಸಚಿವರಾಗ್ತಾರೆ. ಕಪ್ಪು ಹಣ ಕೊಡದವರು ಸಚಿವರಾಗಲ್ಲ. ಹಣ ನೀಡಿದರೆ ಮಾತ್ರ ಮಂತ್ರಿಗಳಾಗಿ ಮುಂದುವರೆಯುತ್ತಿರಿ ಅಂತ ಸ್ವತಃ ಸಿಎಂ ಅವರೇ ಹೇಳ್ತಾರಂತೆ ಅಂತ ಗಂಭೀರವಾದ ಆರೋಪ ಮಾಡಿದರು.
ಮಂತ್ರಿಗಳು ಹಣಕೊಡಲು ಆಗಲ್ಲ ಅಂದ್ರೆ ಗೇಟ್ ಪಾಸ್ ಕೊಟ್ಟು ಕಳುಹಿಸುತ್ತಾರೆ. ಉದಾಹರಣೆಗೆ ರಾಜಣ್ಣ ಪರಿಸ್ಥಿತಿ ನೋಡಬಹುದು. ಸಚಿವ ಸಂಪುಟದ ಸಚಿವರಿಗೆ ಎಲ್‌ಐಸಿ ಏಜೆಂಟರಿಗೆ ಟಾರ್ಗೆಟ್ ನೀಡುವಂತೆ ಕಲೆಕ್ಷನ್ ಟಾರ್ಗೆಟ್ ಕೊಡುತ್ತಿದ್ದಾರೆ ಎಂದರು.

