ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 21,390 ಹೊಸ ಪ್ರಕರಣಗಳು ಪತ್ತೆಯಾಗಿವೆ.
Advertisement
ಇಂದು ಬೆಂಗಳೂರಿನಲ್ಲಿ 6 ಮಂದಿ ಸೇರಿ ಒಟ್ಟು 10 ಮಂದಿ ಕೋವಿಡ್ 19ನಿಂದ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ ಶೇ.10.96ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ತೀವ್ರ ಬೆನ್ನು ನೋವು- ಬೆಂಗ್ಳೂರಿಗೆ ವಾಪಸ್ ಆದ ಮಾಜಿ ಸಿಎಂ
Advertisement
New cases cross 21k in Karnataka and 15k in Bengaluru:
◾New cases in State: 21,390
◾New cases in B'lore: 15,617
◾Positivity rate in State: 10.96%
◾Discharges: 1,541
◾Active cases State: 93,009 (B'lore- 73k)
◾Deaths:10 (B'lore- 06)
◾Tests: 1,95,047#COVID19 #Omicron
— Dr Sudhakar K (@mla_sudhakar) January 12, 2022
Advertisement
Advertisement
ಸಿಲಿಕಾನ್ ಸಿಟಿಯಲ್ಲಿ 73 ಸಾವಿರ ಸೇರಿ ರಾಜ್ಯದಲ್ಲಿ ಒಟ್ಟು 93,009 ಸಕ್ರಿಯ ಪ್ರಕರಣಗಳಿವೆ. 1,541 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,95,047 ಮಂದಿಯನ್ನು ಇಂದು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂದು ಬಾಗಲಕೋಟೆ 13, ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೆಂಗಳೂರು ನಗರ 15,617, ಬೀದರ್ 111, ಚಾಮರಾಜನಗರ 106, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 87, ಚಿತ್ರದುರ್ಗ 86, ದಕ್ಷಿಣ ಕನ್ನಡ 519, ದಾವಣಗೆರೆ 137, ಧಾರವಾಡ 264, ಗದಗ 43, ಹಾಸನ 409, ಹಾವೇರಿ 14, ಕಲಬುರಗಿ 188, ಕೊಡಗು 69, ಕೋಲಾರ 282, ಕೊಪ್ಪಳ 47, ಮಂಡ್ಯ 319, ಮೈಸೂರು 524, ರಾಯಚೂರು 91, ರಾಮನಗರ 135, ಶಿವಮೊಗ್ಗ 201, ತುಮಕೂರು 594, ಉಡುಪಿ 361, ಉತ್ತರ ಕನ್ನಡ 199, ವಿಜಯಪುರ 64 ಮತ್ತು ಯಾದಗಿರಿಯಲ್ಲಿ 10 ಪಾಸಿಟಿವ್ ಪ್ರಕರಣ ದಾಖಲಾಗಿದೆ.