ನವದೆಹಲಿ: ಈ ಹಿಂದೆ ಕರ್ನಾಟಕದಲ್ಲಿ ಸರ್ಕಾರ ಅದ್ಧೂರಿ ಮದುವೆಗೆ ಬ್ರೆಕ್ ಹಾಕುವ ಪ್ರಯತ್ನ ಮಾಡಿತ್ತು ಆದರೆ ಈಗ ಲೋಕಸಭೆಯಲ್ಲೂ ಕೂಡ ಅದಕ್ಕೆ ಬ್ರೇಕ್ ಹಾಕುವಂತ ಪ್ರಯತ್ನ ಮಾಡಲಾಗುತ್ತಿದೆ.
ಬಿಹಾರ ರಾಜಕಾರಣಿ ಪಪ್ಪು ಯಾದವ್ ಪತ್ನಿಯಾದ ಸಂಸದೆ ರಂಜಿತ ರಾಜನ್ ದುಬಾರಿ ಮದುವೆ ವಿರುದ್ಧ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮದುವೆಗಳು ಎರಡು ಕುಟುಂಬಗಳನ್ನು ಒಂದು ಮಾಡುವಂತ ಕಾರ್ಯವಾಗಿದೆ. ಆದರೆ ಇತ್ತೀಚಿಗೆ ಅವರ ಸಂಪತ್ತನ್ನು ತೋರಿಸುವ ಕಾರ್ಯಕ್ರಮಗಳಾಗಿವೆ. ಆದ್ದರಿಂದ 5 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿ ಯಾರು ಮದುವೆ ಮಾಡಿಕೊಳ್ಳುತ್ತಾರೆ ಅಂತವರು ಆ ಮೊತ್ತದದಲ್ಲಿ ಶೇಕಡಾ 10ರಷ್ಟು ಹಣವನ್ನು ಬಡಹೆಣ್ಣು ಮಕ್ಕಳ ಮದುವೆಗೆ ದೇಣಿಗೆ ನೀಡಬೇಕು. ಅದಕ್ಕಾಗಿ ಸರ್ಕಾರ ನಿಧಿಯನ್ನು ಸ್ಥಾಪಿಸಲಿದೆ ಎಂದು ತಿಳಿಸಿದ್ದಾರೆ.
Advertisement
ಇದರಿಂದ ಅದ್ಧೂರಿ ಮದುವೆಗೆ ಬ್ರೆಕ್ ಹಾಕಿದ ಹಾಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ಮಾರ್ಚ್ 9ರ ನಂತರ ಮುಂದುವರೆಯಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಒಂದು ವೇಳೆ ಈ ಮಸೂದೆ ಅಂಗೀಕಾರವಾಗಿ ಜಾರಿಗೆ ಬಂದ ನಂತರ, ಎಲ್ಲಾ ಮದುವೆಗಳನ್ನು 60 ದಿನಗಳ ಒಳಗೆ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಮಸೂದೆಯಲ್ಲಿ ಹೇಳಲಾಗಿದೆ.