ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌-ಬಿಜೆಪಿ ನಡುವೆ ಶುರುವಾಯ್ತು ಪೋಸ್ಟರ್ ವಾರ್

Public TV
2 Min Read
modi rahul gandhi poster war

ನವದೆಹಲಿ: ಪಂಚರಾಜ್ಯಗಳ ಚುನಾವಣೆ ಘೋಷಣೆಗೆ ಇನ್ನೂ ಕೆಲವೇ ದಿನ ಬಾಕಿ ಇದ್ದು, ಚುನಾವಣೆ ಘೋಷಣೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ಶುರುವಾಗಿದೆ. ಬಿಜೆಪಿ ಸಂಸದ ರಾಹುಲ್‌ ಗಾಂಧಿಯನ್ನು (Rahul Gandhi) ಹೊಸ ಕಾಲದ ರಾವಣ ಎಂದರೆ, ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಸುಳ್ಳುಗಾರ ಎಂದು ಕರೆದಿದೆ.

ಶುಕ್ರವಾರ ಎಕ್ಸ್‌ ಪೋಸ್ಟ್‌ನಲ್ಲಿ ಎರಡು ಪಕ್ಷಗಳ ನಡುವೆ ಪೋಸ್ಟರ್ ಸಮರ ಏರ್ಪಟ್ಟಿದೆ. ಹತ್ತು ತಲೆಗಳಿರುವ ರಾಹುಲ್ ಗಾಂಧಿ ಫೋಟೋ ಶೇರ್ ಮಾಡಿರುವ ಬಿಜೆಪಿ ಹೊಸ ಕಾಲದ ರಾವಣ ಎಂದು ಸಂಭೋಧಿಸಿದೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ. ಅವನ ಗುರಿ ಭಾರತವನ್ನು ನಾಶ ಮಾಡುವುದು ಎಂದು ಬಿಜೆಪಿ ಪೋಸ್ಟರ್‌ನಲ್ಲಿ ಹೇಳಿದೆ‌. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಕಾಲದ ರಾವಣ – ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ

ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್ (Congress) ದೊಡ್ಡ ಸುಳ್ಳುಗಾರ ಎಂದು ಟೀಕಿಸಿದೆ. ಮುಂದುವರಿದು ಇನ್ನೂ ಹಲವು ಪೋಸ್ಟರ್ ಪೋಸ್ಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅದಾನಿ’, ‘ಜುಮ್ಲಾ ಬಾಯ್’ ಎಂದು ಶೀರ್ಷಿಕೆ ನೀಡಿ ಫೋಟೋ ಅಪ್ಲೋಡ್ ಮಾಡಿದೆ.

Rahul Gandhi Modi

ಬಳಿಕ ಈ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಅಸಹ್ಯಕರ ಪೋಸ್ಟ್, ರಾವಣ ಪೋಸ್ಟರ್ ಮೂಲಕ ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶ ಹೊಂದಿದೆ ಎಂದು ಹೇಳಿದೆ. ರಾಹುಲ್‌ ಗಾಂಧಿ ತಂದೆ ಮತ್ತು ಅಜ್ಜಿಯನ್ನು ದುಷ್ಟ ಶಕ್ತಿಗಳಿಂದ ಹತ್ಯೆ ಮಾಡಲಾಗಿದೆ. ಈಗ ಬಿಜೆಪಿ (BJP) ಭಾರತವನ್ನು ವಿಭಜಿಸಲು ಬಯಸುತ್ತದೆ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್ – ದಿನಾಂಕ ಘೋಷಣೆ ಯಾವಾಗ?

ಪೋಸ್ಟರ್‌ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಗೌರವಾನ್ವಿತ ನರೇಂದ್ರ ಮೋದಿ ಅವರೇ ಮತ್ತು ಜೆ.ಪಿ. ನಡ್ಡಾ ಅವರೇ ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ? ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ? ನಿಮ್ಮ ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆಯೇ? ನೀವು ಮಾಡಿದ ಭರವಸೆಗಳಂತೆಯೇ ನೀವು ಮಾಡಿದ ಪ್ರಮಾಣಗಳನ್ನು ಮರೆತುಬಿಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Web Stories

Share This Article