ಪಾಟ್ನಾ: ನರೇಂದ್ರ ಮೋದಿ ಸರ್ಕಾರ ಸಚಿವ ಸ್ಥಾನ ಹಂಚಿಕೆ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯಕ್ಕೆ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ.
ಸಚಿವ ಸ್ಥಾನ ಹಂಚಿಕೆ ಭಿನ್ನಾಭಿಪ್ರಾಯದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಎಂದಿಗೂ ಕ್ಯಾಬಿನೆಟ್ ಸ್ಥಾನ ಕೇಳಲ್ಲ. ಆದರೆ ಎನ್‍ಡಿಎ ಮೈತ್ರಿ ಪಕ್ಷವಾಗಿ ಇರುವುದಕ್ಕೆ ಹೆಚ್ಚು ಸಂತೋಷವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
Advertisement
ಬಿಜೆಪಿ ನಾಯಕರು ಜೆಡಿಯು ಪಕ್ಷಕ್ಕೂ ಒಂದು ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು. ಒಂದು ಸ್ಥಾನದ ಅವಶ್ಯಕತೆ ನಮಗಿಲ್ಲ, ಈ ಕುರಿತು ಪಕ್ಷದ ಮುಖಂಡರ ಸಲಹೆ ಪಡೆಯಬೇಕಿದೆ ಎಂದು ತಿಳಿಸಿದ್ದೆ. ಅದೇ ರೀತಿ ಪಕ್ಷದ ಸಲಹೆ ಕೇಳಿದಾಗ, ಎನ್‍ಡಿಎ ಒಕ್ಕೂಟದಲ್ಲಿ ಇರೋಣ ಹಾಗೂ ನಮಗೆ ಸಚಿವ ಸ್ಥಾನ ಬೇಡ ಎಂಬ ಒಮ್ಮತದ ಅಭಿಪ್ರಾಯ ಬಂದಿದೆ. ಎನ್‍ಡಿಎ ಮೈತ್ರಿ ಕೂಟದ ಜೊತೆಗೆ ಸಾಗುತ್ತೇವೆ, ನಮ್ಮಲ್ಲಿ ಯಾವುದೇ ಮುನಿಸು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಬಂಪರ್: ಡಿವಿಎಸ್, ಜೋಶಿ, ಅಂಗಡಿಗೆ ಖಾತೆ ಹಂಚಿಕೆ
Advertisement
Bihar CM & JD(U) leader Nitish Kumar: I am seeing reports in newspapers that we had asked for 3 berths, this is false. We had not asked for any berth. https://t.co/vVn7gevqrZ
— ANI (@ANI) May 31, 2019
Advertisement
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಎನ್‍ಡಿಎ ಮೈತ್ರಿಕೂಟದ ಪಕ್ಷಗಳಿಗೆ ತಲಾ ಒಂದು ಮಂತ್ರಿ ಸ್ಥಾನ ನೀಡಲು ಬಿಜೆಪಿ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಜೆಡಿಯು ಪಕ್ಷದ ಸಂಸದ, ನಿತೀಶ್ ಕುಮಾರ್ ಅವರ ಆಪ್ತ ರಾಮಚಂದ್ರ ಪ್ರತಾಪ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಲು ಎನ್‍ಡಿಎ ಮುಂದಾಗಿತ್ತು. ಕೇವಲ ಒಂದು ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೋದಿ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿತ್ತು. ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಅರ್ಧಗಂಟೆ ಮುನ್ನ ಪಕ್ಷದ ವರಿಷ್ಠ ನಿತೀಶ್ ಕುಮಾರ್ ಅವರು ಈ ವಿಷಯ ಪ್ರಕಟಿಸಿದ್ದರು.
Advertisement
ನಮಗೆ ಸಂಪುಟದಲ್ಲಿ ಅತಿ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ. ಅದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಆದರೆ ಎನ್‍ಡಿಎ ಜೊತೆಗೆ ನಮ್ಮ ಬಾಂಧವ್ಯ ಮುಂದುವರಿಯಲಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದರು.