ಕಾಲಿವುಡ್ ಟು ಹಾಲಿವುಡ್ ಅಂಗಳದವರೆಗೂ ಸೌಂಡ್ ಮಾಡುತ್ತಿರುವ ಧನುಷ್ ಸದ್ಯ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ.
ಸದ್ಯ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬ್ಯುಸಿಯಿರುವ ಧನುಷ್, ಇತ್ತೀಚೆಗಷ್ಟೇ ಐಶ್ವರ್ಯ ರಜನೀಕಾಂತ್ ಜತೆಗಿನ 19 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಈವರೆಗೂ ಈ ಜೋಡಿ ಯಾವ ಕಾರಣಕ್ಕೆ ಬೇರೆ ಬೇರೆಯಾಗಿದ್ದಾರೆ ಎಂಬುದೇ ತಿಳಿದು ಬಂದಿಲ್ಲ. ಇಬ್ಬರು ದೂರ ದೂರ ಆಗಿರುವ ಈ ಮಾಜಿ ಜೋಡಿ ಸದ್ಯ ತಮ್ಮ ತಮ್ಮ ವೃತ್ತಿ ಬದುಕಿನತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಧನುಷ್ ಮತ್ತು ರಜನಿಕಾಂತ್ ಪುತ್ರಿಯ ಡಿವೋರ್ಸ್‌ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾರಣ ಅಂತಾ ಸಖತ್ ಚರ್ಚೆ ಆಗುತ್ತಿದೆ.




