ವಾಷಿಂಗ್ಟನ್: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಜಾಹೀರಾತು ಬೆಂಬಲಿತ ಯೋಜನೆಯನ್ನು ಪ್ರಾರಂಭಿಸಲು ಮೈಕ್ರೋಸಾಫ್ಟ್‌ನೊಂದಿಗೆ ಪಾಲುದಾರರಾಗುತ್ತಿರುವ ಬಗ್ಗೆ ತಿಳಿಸಿದೆ.
ಇತ್ತೀಚೆಗೆ ನೆಟ್‌ಫ್ಲಿಕ್ಸ್ ಕಡಿಮೆಯಾಗುತ್ತಿರುವ ಚಂದಾದಾರರನ್ನು ಸೆಳೆಯಲು ಜಾಹೀರಾತು ಬೆಂಬಲಿತ ಅಗ್ಗದ ಚಂದಾದಾರಿಕೆಯನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ನೆಟ್‌ಫ್ಲಿಕ್ಸ್ ಈ ಯೋಜನೆಗಾಗಿ ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸುತ್ತಿರುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: 2 ಮಕ್ಕಳನ್ನು ಮಾತ್ರ ಹೊಂದುವ ಕಾನೂನನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್ ಓವೈಸಿ
Advertisement
Advertisement
ನೆಟ್‌ಫ್ಲಿಕ್ಸ್‌ನ ತಂತ್ರಜ್ಞಾನ ಹಾಗೂ ಮಾರಾಟದ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನೀಡಲಾಗುವ ಎಲ್ಲಾ ಜಾಹೀರಾತುಗಳು ಮೈಕ್ರೋಸಾಫ್ಟ್ ಪ್ಲಾಟ್‌ಪಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ ಎಂದು ಹೇಳಿದೆ.
Advertisement
ನೆಟ್‌ಫ್ಲಿಕ್ಸ್ ತನ್ನ ಅಸ್ತಿತ್ವದಲ್ಲಿರುವ ಜಾಹೀರಾತು ಮುಕ್ತ ಚಂದಾದಾರಿಕೆ, ಸ್ಟ್ಯಾಂಡರ್ಡ್ ಹಾಗೂ ಪ್ರೀಮಿಯಂ ಯೋಜನೆಗಳು ಹೊಸ ಹಾಗೂ ಹಳೆಯ ಎಲ್ಲಾ ಗ್ರಾಹರಿಗೂ ಲಭ್ಯವಿರುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ
Advertisement
ಈ ಬಗ್ಗೆ ಮಾಹಿತಿ ನೀಡಿದ ನೆಟ್‌ಫ್ಲಿಕ್ಸ್ ಸಿಒಒ, ಇದು ಕೇವಲ ಆರಂಭವಾಗಿದೆ. ನಾವು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಆದರೆ ನಮ್ಮ ದೀರ್ಘಾವಧಿಯ ಗುರಿ ಸ್ಪಷ್ಟವಾಗಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನಾವು ನೀಡಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.