ವಾಷಿಂಗ್ಟನ್: ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ.
ಈ ಹಿಂದೆ ನೆಟ್ಫ್ಲಿಕ್ಸ್ ಚಂದಾದಾರು ತಮ್ಮ ಪಾಸ್ವರ್ಡ್ ಅನ್ನು ಗೆಳೆಯರೊಡನೆ ಹಂಚಿಕೊಳ್ಳುವ ಮೂಲಕ ತಮಗೆ ಸಿಗುತ್ತಿದ್ದ ಮಲ್ಟಿಪಲ್ ಡಿವೈಸ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಅವಕಾಶಕ್ಕೆ ನೆಟ್ಫ್ಲಿಕ್ಸ್ ಕಡಿವಾಣ ಹಾಕಲಿದೆ. ಗೆಳೆಯರೊಡನೆ ಪಾಸ್ವರ್ಡ್ ಹಂಚಿಕೊಳ್ಳಲು ನೆಟ್ಫ್ಲಿಕ್ಸ್ ಹೆಚ್ಚುವರಿ ಶುಲ್ಕ ವಿಧಿಸಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಡೌನ್ಲೋಡಿಂಗ್ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆಗೆ ಕನ್ನ
Advertisement
Advertisement
ನೆಟ್ಫ್ಲಿಕ್ಸ್ ತನ್ನ ಮುಖ್ಯ ಚಂದಾದಾರರಿಗೆ ಇ-ಮೇಲ್ನಲ್ಲಿ ಕೋಡ್ಅನ್ನು ಕಳುಹಿಸಲಿದೆ. ಈ ಕೋಡ್ಗಳ ಮುಖಾಂತರ ಕೇವಲ ಚಂದಾದಾರರ ಮನೆಯಲ್ಲಿರುವ ಡಿವೈಸ್ಗಳಲ್ಲಿ ನೆಟ್ಫ್ಲಿಕ್ಸ್ ಲಾಗ್ಇನ್ ಆಗಬಹುದು. ಮಿತಿಗಿಂತ ಹೆಚ್ಚುವರಿ ಸ್ನೇಹಿತರೊಂದಿಗೆ ಪಾಸ್ವರ್ಡ್ ಹಂಚಿಕೊಂಡಲ್ಲಿ ಮುಖ್ಯ ಚಂದಾದಾರನೇ ಅದರ ಹೆಚ್ಚುವರಿ ಹಣವನ್ನು ಭರಿಸಬೇಕು.
Advertisement
ಈಗಾಗಲೇ ಬ್ರಿಟನ್ ಹಾಗೂ ಐರ್ಲೆಂಡಿನಲ್ಲಿ ಈ ಕ್ರಮ ಜಾರಿಯಾಗಿದೆ. ಚಂದಾದಾರರು ತಮ್ಮ ಗೆಳೆಯರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ 2-3 ಡಾಲರ್ ಭರಿಸಬೇಕು ಎಂದು ಕಂಪನಿ ತಿಳಿಸಿದೆ. ಶೀಘ್ರವೇ ನೆಟ್ಫ್ಲಿಕ್ಸ್ನ ಹೊಸ ಕ್ರಮ ಜಾಗತಿಕವಾಗಿ ಜಾರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 2023ರಲ್ಲಿ ಬರಲಿದೆ ಭಾರತದ ಮೊದಲ RRTS ರೈಲು
Advertisement
ನೆಟ್ಫ್ಲಿಕ್ಸ್ ತನ್ನ ಹೊಸ ಚಂದಾದಾರಿಗೆ ಈಗಾಗಲೇ ಈ ನಿಯಮವನ್ನು ಜಾರಿಗೊಳಿಸಿದೆ. ಪ್ರಸ್ತುತ ನೆಟ್ಫ್ಲಿಕ್ಸ್ ಬಳಕೆದಾರರಿಗೆ ಈ ನಿಯಮ ಅನ್ವಯವಾಗುವುದಕ್ಕೂ 30 ದಿನಗಳ ಮೊದಲು ತಿಳಿಸಲಿದೆ.