ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhas Chandra Bose) ಅವರು ಎಡಪಂಥೀಯರು. ಅವರ ಧೋರಣೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ (BJP) ಪ್ರತಿಬಿಂಬಿಸುವುದಿಲ್ಲ ಎಂದು ನೇತಾಜಿ ಅವರ ಪುತ್ರಿ ಅನಿತಾ ಜೋಸ್ ಫಾಫ್ (Anita Bose-Pfaff) ಅಭಿಪ್ರಾಯಪಟ್ಟಿದ್ದಾರೆ.
ಜನವರಿ 23 ರಂದು ನಗರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಆಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಯೋಜನೆಗಳ ಕುರಿತು ನೇತಾಜಿ ಪುತ್ರಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ನ (RSS) ಸಿದ್ಧಾಂತ ಮತ್ತು ರಾಷ್ಟ್ರೀಯವಾಗಿ ನಾಯಕನ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ವಿಚಾರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ. ಒಂದಕ್ಕೊಂದು ತಾಳೆಯಾಗುವುದಿಲ್ಲ ಎಂದು ಅನಿತಾ ಜೋಸ್ ಫಾಫ್ ತಿಳಿಸಿದ್ದಾರೆ. ಇದನ್ನೂ ಓದಿ: Hath Se Hath Jodo Yatra – ಭಾರತ್ ಜೋಡೋ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಹೊಸ ಅಭಿಯಾನ
Advertisement
Advertisement
ಸಿದ್ಧಾಂತಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ಪಕ್ಷಕ್ಕಿಂತ ಕಾಂಗ್ರೆಸ್ (Congress) ನೇತಾಜಿಯೊಂದಿಗೆ ಹೆಚ್ಚು ಸಾಮ್ಯತೆ ಹೊಂದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಧರ್ಮನಿಷ್ಠ ಹಿಂದೂಗಳಾಗಿದ್ದರೂ, ಇತರರ ನಂಬಿಕೆಗಳನ್ನು ಗೌರವಿಸುವ ಮನೋಭಾವದವರಾಗಿದ್ದ ನೇತಾಜಿ ಅವರು ಬೋಧಿಸಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸುವ ಪರಿಕಲ್ಪನೆಯನ್ನು ಪ್ರತಿಬಿಂಬಿಸುವುದಿಲ್ಲ. ನೇತಾಜಿ ಅವರು ವಿವಿಧ ಧರ್ಮಗಳ ಸದಸ್ಯರ ನಡುವಿನ ಸಹಕಾರದ ಪರವಾಗಿದ್ದರು ಎಂದು ಹೇಳಿದ್ದಾರೆ.
Advertisement
ಆರ್‌ಎಸ್‌ಎಸ್ ಮತ್ತು ಬಿಜೆಪಿ ಈ ಧೋರಣೆಯನ್ನು ಪ್ರತಿಬಿಂಬಿಸಬೇಕಾಗಿಲ್ಲ. ಸರಳವಾದ ಲೇಬಲ್ ಹಾಕಲು ಬಯಸಿದರೆ, ಅವರು ಬಲಪಂಥೀಯರು. ಆದರೆ ನೇತಾಜಿ ಎಡಪಂಥೀಯರಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ; ಅವರ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ – KGF Babu
Advertisement
ಆರ್‌ಎಸ್‌ಎಸ್ ಮತ್ತು ನೇತಾಜಿ ಅವರ ಸಿದ್ಧಾಂತಗಳು ಪರಸ್ಪರ ಭಿನ್ನವಾಗಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಎರಡು ಮೌಲ್ಯ ವ್ಯವಸ್ಥೆಗಳು ಹೊಂದಿಕೆಯಾಗುವುದಿಲ್ಲ. ನೇತಾಜಿಯವರ ಆದರ್ಶ ಮತ್ತು ಆಲೋಚನೆಗಳನ್ನು ಸ್ವೀಕರಿಸಲು ಆರ್‌ಎಸ್‌ಎಸ್ ಬಯಸಿದ್ದರೆ ಅದು ಖಂಡಿತವಾಗಿಯೂ ಒಳ್ಳೆಯದು. ಹಲವಾರು ಗುಂಪುಗಳು ನೇತಾಜಿಯವರ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಬಯಸುತ್ತವೆ ಎಂದು ತಿಳಿಸಿದ್ದಾರೆ.
ನೇತಾಜಿ ಆರ್‌ಎಸ್‌ಎಸ್‌ನ ಟೀಕಾಕಾರರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ನಿಮಗೆ ನೀಡಬಹುದಾದ ಯಾವುದೇ ಉಲ್ಲೇಖ (ನೇತಾಜಿ) ನನಗೆ ತಿಳಿದಿಲ್ಲ. ಅವರು ಆರ್‌ಎಸ್‌ಎಸ್ ಸದಸ್ಯರ ಬಗ್ಗೆ ಟೀಕೆ ಹೇಳಿಕೆಗಳನ್ನು ನೀಡಿರಬಹುದು. ಅವರ (ನೇತಾಜಿ) ಅಭಿಪ್ರಾಯಗಳು ಏನೆಂದು ನನಗೆ ತಿಳಿದಿದೆ. RSS ಮತ್ತು ನೇತಾಜಿಯವರ ಜಾತ್ಯತೀತತೆಯ ಸಿದ್ಧಾಂತಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅವಳಿ ಬ್ಲಾಸ್ಟ್- ಭಾರತ್ ಜೋಡೋ ಯಾತ್ರೆಗೆ ಹೈಅಲರ್ಟ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸ್ಮರಣಾರ್ಥ ನಗರದ ಶಾಹಿದ್ ಮಿನಾರ್ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k