ಮಂಡ್ಯ: ಬೇಸಿಗೆ ಬಂತು ಅಂದ್ರೆ ಸಾಕು ಜನರು ಬೀಚ್‍ಗಳ ಕಡೆ ಮುಖ ಮಾಡ್ತಾರೆ. ಆದ್ರೆ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಯಲ್ಲೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿದೆ.
Advertisement
ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣಕ್ಕೆ ಕಡ್ಡಿಗಳನ್ನು ತರುತ್ತಿರುವ ಕೆಲ ಪಕ್ಷಿಗಳು, ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ, ಸಂತಾನೋತ್ಪತ್ತಿ ಮಾಡುತ್ತಿರುವ ಜೋಡಿ ಹಕ್ಕಿಗಳು, ಮೀನಿನ ಭೇಟೆಗಾಗಿ ಹೊಂಚು ಹಾಕುತ್ತಿರುವ ಮತ್ತಷ್ಟು ಪಕ್ಷಿಗಳು, ಈ ಮಧ್ಯ ಭಯ ಹುಟ್ಟಿಸುವ ಹಾಗೆ ಮಲಗಿರುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ. ಈ ದೃಶ್ಯ ಕಾಣಲು ಸಿಗುವುದು ರಂಗನತಿಟ್ಟು ಪಕ್ಷಿಧಾಮದಲ್ಲಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಗಾಲದಲ್ಲೂ ಪಕ್ಷಿಗಳ ಕಲರವ ಹಾಗೂ ಕಾವೇರಿ ತಾಯಿಯಿಂದ ಕಂಗೊಳಿಸುತ್ತಿದೆ. ಇದನ್ನೂ ಓದಿ: ತುಂಬು ಗರ್ಭಿಣಿ ಪತ್ನಿಯನ್ನು ಬಿಟ್ಟು ಉಕ್ರೇನ್ ಹೇಗೆ ತೊರೆಯಲಿ..?- ಭಾರತೀಯನ ಅಳಲು
Advertisement
Advertisement
ಸದ್ಯ ರಂಗನತಿಟ್ಟು ಪಕ್ಷಿಧಾಮಕ್ಕೆ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಆಹಾರಕ್ಕಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಕ್ಕೆ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಭಾವಿಸುತ್ತದೆ. ಈಗ ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್‍ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಲಕ್ಷಾಂತರ ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿವೆ. ಇದಲ್ಲದೇ ರಂಗನತಿಟ್ಟಿನಲ್ಲಿ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಕಾಡು ನಾಯಿಗಳು ನೀರಿನಲ್ಲಿ ಮುಳುಗೇಳುವ ದೃಶ್ಯಗಳು ಸಹ ಗೋಚರಿಸುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.
Advertisement
ಇಷ್ಟು ದಿನ ಕೊರೊನಾ ಸಂಖ್ಯೆ ಹೆಚ್ಚಿದ್ದ ಕಾರಣ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಇದೀಗ ಕೊರೊನಾ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾಲ ಇದಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬೋಟಿಂಗ್ ಮೂಲಕ ಪಕ್ಷಿ ಸೌಂದರ್ಯದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ರಂಗನತಿಟ್ಟಿನಲ್ಲಿ ಇಷ್ಟಲ್ಲದೇ ಉದ್ಯಾನವನ, ಮಕ್ಕಳು ಆಡವಾಡುವ ಉಪಕರಣಗಳು ಸಹ ಇದೆ. ಒಮ್ಮೆ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ಮಾಡಿದ್ರೆ ಸುಮಾರು ನಾಲ್ಕು ಗಂಟೆಳಾದ್ರು ಸಹ ಪಕ್ಷಿಧಾಮವನ್ನು ಸುತ್ತಲೂ ಬೇಕಾಗಿಬರುತ್ತದೆ. ಇಲ್ಲಿಗೆ ಬಂದಂತಹ ಪ್ರವಾಸಿಗರಂತು ಫುಲ್ ಎಂಜಾಯ್ ಮಾಡ್ತಾ ಇದ್ದಾರೆ. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
ಒಟ್ಟಾರೆ ಒಂದು ಕಡೆ ರಂಗನತಿಟ್ಟಿನಲ್ಲಿ ಪಕ್ಷಿಗಳ ಕಲರವ ನೋಡುಗರಿಗೆ ಮುದ ನೀಡುತ್ತಿದ್ದು, ಇನ್ನೊಂದು ಕಡೆ ಕೊರೊನಾ ಕಡಿಮೆಯಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮದ ಕಡೆ ಮುಖ ಮಾಡುತ್ತಿದ್ದಾರೆ.