ದಿ ಕೇರಳ ಸ್ಟೋರಿ ಸಿನಿಮಾದ ನಂತರ ಮಲಯಾಳಂ (Malayalam) ಚಿತ್ರರಂಗದಲ್ಲಿ ಮತ್ತೊಂದು ಸಿನಿಮಾ ವಿವಾದಕ್ಕೆ (Controversy) ಕಾರಣವಾಗಿದೆ. ಕ್ರೈಸ್ತ ಸನ್ಯಾಸಿಯ ಪ್ರೇಮಕಥಾ ಹಂದರ ಹೊಂದಿರುವ ನೆರ್ಚಪೆಟ್ಟಿ (Nerchapetti) ಸಿನಿಮಾ ರಿಲೀಸ್ ಮಾಡದಂತೆ ಹಲವರು ಪ್ರತಿಭಟನೆ ನಡೆಸಿದ್ದಾರೆ. ಕೇರಳದಾದ್ಯಂತ ಅಂಟಿಸಿರುವ ಸಿನಿಮಾ ಪೋಸ್ಟರ್ ಅನ್ನು ಹರಿದು ಹಾಕುತ್ತಿದ್ದಾರೆ.
Advertisement
ಕ್ರೈಸ್ತ ಸನ್ಯಾಸಿಯ (Christian monk) ಪ್ರೇಮಕಥೆಯನ್ನು ತೋರಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಕ್ರೈಸ್ತ ಸನ್ಯಾಸಿಯರ ಭಾವನೆಗೆ ಧಕ್ಕೆ ಆಗುವಂತಹ ಹಲವಾರು ಸನ್ನಿವೇಶಗಳು ಈ ಚಿತ್ರದಲ್ಲಿ ಇವೆಯಂತೆ. ಅಂತಹ ದೃಶ್ಯಗಳು ಸನ್ಯಾಸಿಯರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿವೆ ಎನ್ನುವುದು ಹೋರಾಟಗಾರರ ಆಗ್ರಹ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?
Advertisement
Advertisement
ಈ ಹಿಂದೆಯೂ ಸಿನಿಮಾದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಗಲಾಟೆಯನ್ನೂ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ಶೂಟಿಂಗ್ ಮಾಡಲಾಗಿತ್ತು. ಇದೀಗ ನೆರ್ಚಪಟ್ಟಿ ಸಿನಿಮಾ ಜುಲೈ 2ನೇ ವಾರದಂದು ತೆರೆಗೆ ಬರಲು ಸಿದ್ಧವಾಗಿದ್ದು, ಅದನ್ನು ತಡೆಯುವಂತೆ ಪ್ರಯತ್ನವನ್ನು ಮಾಡಲಾಗುತ್ತಿದೆ.
Advertisement
ಬಾಬು ಜಾನ್ ಕೊಕ್ಕವಯಲ್ (Babu John Kokkavyal) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಕ್ರೈಸ್ತ ಸನ್ಯಾಸಿಯಾಗಿ ನೈರಾ ನಿಹಾರ್ (Naira Nihar) ಕಾಣಿಸಿಕೊಂಡಿದ್ದಾರೆ. ಅತುಲ್ ಸುರೇಶ್ ಸಿನಿಮಾದ ನಾಯಕ. ಒಂದು ಕಡೆ ಚಿತ್ರತಂಡ ಸಿನಿಮಾವನ್ನು ಎಲ್ಲರಿಗೂ ತೋರಿಸಲು ಮುಂದಾಗಿದ್ದರೆ, ಮತ್ತೊಂದು ಕಡೆ ಸಿನಿಮಾ ಪ್ರದರ್ಶನ ಮಾಡದಂತೆ ತಡೆಯುವ ಪ್ರಯತ್ನಗಳು ನಡೆದಿವೆ.
Web Stories