ತಿರುಪತಿಗೆ ತೆರಳಿದ್ದ ಉದ್ಯಮಿ ಮನೆಯಲ್ಲಿ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

Public TV
2 Min Read
Bengaluru Nepali Couple Theft

ಬೆಂಗಳೂರು: ತಿರುಪತಿಗೆ ತೆರಳಿದ್ದ ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ದೋಚಿ ನೇಪಾಳಿ ದಂಪತಿ (Nepali Couple) ಪರಾರಿಯಾಗಿರುವ ಘಟನೆ ನಗರದ ಹೆಚ್‌ಎಎಲ್ (HAL) ಬಳಿ ನಡೆದಿದೆ.

ಇದೀಗ ಮತ್ತೆ ಬೆಂಗಳೂರಿನಲ್ಲಿ (Bengaluru) ನೇಪಾಳಿಗರಿಂದ ಮನೆ ದರೋಡೆ ಮುಂದುವರೆದಿದೆ. ನಗರದ ಹೆಚ್‌ಎಎಲ್ ವಾಸಿಯಾಗಿರುವ ಉದ್ಯಮಿ ರಮೇಶ್ ಅವರು ಕಳೆದ 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿಯನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಇದನ್ನೂ ಓದಿ: ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

ಕೆಲಸಕ್ಕೆ ಸೇರಿದ ಈ ದಂಪತಿ, ತುಂಬಾ ನಾಜೂಕಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಮಾಲೀಕನ ನಂಬಿಕೆಗಳಿಸಿಕೊಂಡಿದ್ದರು. ದಂಪತಿಯ ನಯ-ವಿನಯ ನೋಡಿದ ರಮೇಶ್, ಕುಟಂಬ ಸಮೇತ ಮೇ 27ರಂದು ತಿರುಪತಿಗೆ ಹೊರಟಿದ್ದರು. ಇದನ್ನೂ ಓದಿ: ಹಟ್ಟಿ ಚಿನ್ನದಗಣಿ | 2,800 ಅಡಿ ಆಳದಲ್ಲಿ ಏರ್ ಬ್ಲಾಸ್ಟ್ – ಕಾರ್ಮಿಕ ದುರ್ಮರಣ

ಈ ವೇಳೆ ರಾಜ್ ಮತ್ತು ದೀಪಾಗೆ ಮನೆ ಕಡೆಗೆ ನೋಡಿಕೊಳ್ಳಿ ಎಂದು ಹೇಳಿ ತಿರುಪತಿಗೆ ತೆರಳಿದ್ದರು. ತಿರುಪತಿಗೆ ತೆರಳಿದ ಕೆಲವೇ ಗಂಟೆಗಳಲ್ಲಿ ರಮೇಶ್ ಅವರು ತಮ್ಮ ಮನೆಯ ಸಿಸಿಟಿವಿಯನ್ನು ಮೊಬೈಲ್ ಮೂಲಕ ನೋಡಿದಾಗ ಆಫ್ ಆಗಿತ್ತು. ಇದನ್ನೂ ಓದಿ: Raichur | ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ – 8 ಮಂದಿ RCB ಫ್ಯಾನ್ಸ್ ಅರೆಸ್ಟ್

ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಕರೆಂಟ್ ಹೋಗಿರಬೇಕು ಎಂದು ತಮ್ಮ ಪಾಡಿಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಮಾರನೇ ದಿನ ವಾಪಸು ಆಗಿದ್ದರು. ಈ ವೇಳೆ ಮನೆಗೆ ಬಂದ ವೇಳೆ ಮನೆಯ ಬಾಗಿಲು ತೆರೆದಿತ್ತು. ಈ ವೇಳೆ ಮನೆ ಒಳಗೆ ಹೋಗಿ ಪರಿಶೀಲಿಸಿದಾಗ 2 ಕೆಜಿ ಚಿನ್ನ, 10 ಲಕ್ಷ ರೂ. ನಗದು, ಒಂದು ಲೈಸೆನ್ಸ್ ಹೊಂದಿರುವ ಗನ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ (HAL Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR

Share This Article