ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್ ಬಗ್ಗೆ ನಟ ಪ್ರೇಮ್ (Nenapirali Prem) ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗಕ್ಕೆ ದರ್ಶನ್ (Darshan) ಕಾಂಟ್ರಿಬ್ಯೂಷನ್ ತುಂಬಾ ಇದೆ ಎಂದು ನೆನಪಿರಲಿ ಪ್ರೇಮ್ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ
ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣದಿಂದ ದರ್ಶನ್ ಬೇಗ ಆಚೆ ಬರಲಿ ಎಂದಿದ್ದಾರೆ. ಇಂಡಸ್ಟ್ರಿಗೆ ದರ್ಶನ್ ಅವರ ಕಾಂಟ್ರಿಬ್ಯೂಷನ್ ತುಂಬಾ ಇದೆ. ಅವರ ಮೇಲೆ ನಿರ್ಮಾಪಕರು ಕೋಟ್ಯಂತರ ರೂಪಾಯಿ ಅವರ ಬಂಡವಾಳ ಹೂಡಿದ್ದಾರೆ. ಅವರಿಂದ ಇನ್ನೂ ಚಿತ್ರರಂಗಕ್ಕೆ ಕೊಡುಗೆ ಬೇಕಿದೆ. ಸಿನಿಮಾಗೆ ದರ್ಶನ್ ಬೇಕು. ಈ ಕೇಸ್ ಏನಾಗಿದೆ ಅಂತ ಗೊತ್ತಿಲ್ಲ. ಅದು ಏನೇ ಆಗಿರಲಿ ಅವರು ನಿರಪರಾಧಿಯಾಗಿ ಆಚೆ ಬರಲಿ. ಅವರಿಗೆ ಬೇಲ್ ಬೇಗ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ನಮಗೂ ಆ ಫೋಟೋಗಳ ಬಗ್ಗೆ ಗೊತ್ತಿಲ್ಲ. ಸದ್ಯ ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ. ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೂ ನೋವಿದೆ. ಆದರೆ ರೇಣುಕಾಸ್ವಾಮಿ (Renukaswamy) ಮಾಡಿದ್ದು ಒಳ್ಳೆಯ ಕೆಲಸ ಅಲ್ಲ. ಅವರು ಮಾಡಿರುವ ಮೆಸೇಜ್‌ಗಳು ಸರಿ ಇದೆಯಾ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ದರ್ಶನ್ ಪರ ಪ್ರೇಮ್ ಬ್ಯಾಟಿಂಗ್ ಮಾಡಿದ್ದಾರೆ.
ಈ ವೇಳೆ, ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, ಬೇರೆ ಇಂಡಸ್ಟ್ರಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕನ್ನಡ ಚಿತ್ರರಂಗ ತುಂಬಾ ಮಡಿವಂತಿಕೆ ಇರುವ ಇಂಡಸ್ಟ್ರಿ. ಎಲ್ಲಾ ಹೆಣ್ಣುಮಕ್ಕಳಿಗೆ ಒಳ್ಳೆದಾಗುತ್ತದೆ ಅಂದರೆ ನಮ್ಮ ಸಪೋರ್ಟ್ ಇದ್ದೇ ಇರುತ್ತದೆ. ಅವತ್ತಿಂದ ಇವತ್ತಿನವರೆಗೂ ಎಲ್ಲಾ ನಾಯಕಿಯರು ಆತ್ಮೀಯರಾಗಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.