‘ಪಿಂಕ್ ನೋಟ್ ‘ಹುಡುಕಿಕೊಂಡು ದುಬೈಗೆ ಹೊರಟು ನಿಂತ ನೆನಪಿರಲಿ ಪ್ರೇಮ್

Public TV
1 Min Read
nenapirali prem 2

ನೆನಪಿರಲಿ ಪ್ರೇಮ್  (Nenapirali Prem) ದುಬೈಗೆ ಹಾರಿದ್ದಾರೆ. ಜೊತೆಗೆ ಜಾಕಿ ಸಿನಿಮಾ ಖ್ಯಾತಿಯ ಭಾವನಾ (Bhavana) ಅವರನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಪ್ರೇಮ್ ದುಬೈ ವಿಮಾನ ಏರಿದ್ದು, ಪಿಂಕಿ ನೋಟ್ ಹುಡುಕುವುದಕ್ಕಾಗಿ ಎನ್ನುವುದು ವಿಶೇಷ. ಅಂದರೆ, ಪಿಂಕ್ ನೋಟ್ (Pink Note) ಸಿನಿಮಾದ ಶೂಟಿಂಗ್ ದುಬೈನಲ್ಲಿ (Dubai) ನಡೆಯಲಿದ್ದು, ಭಾವನಾ ಮತ್ತು ಪ್ರೇಮ್ ಜೊತೆಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

bhavana menon

ಈ ಸಿನಿಮಾದ ಮೂಲಕ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

nenapirali prem 6

ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದ ಘಟನೆ ಇದಾಗಿದ್ದು, ಭಾವನಾ ಕೂಡ ಮಧ್ಯಮ ವರ್ಗದ ಅಕ್ಕ-ತಂಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

BHAVANA MENON

ದಿಗಂತ್ ಅಲಿಯಾಸ್ ರಕ್ಷಣ್ ಈ ಸಿನಿಮಾದ ನಿರ್ದೇಶಕರಾಗಿದ್ದು, ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

 

‘2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ, ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರಸಾಸೆಲ್ ಖೈಮ್ ದಲ್ಲಿ ಶೇಕಡಾ ಅರವತ್ತರಷ್ಟು ಶೂಟಿಂಗ್ ಮಾಡುತ್ತಾರಂತೆ ನಿರ್ದೇಶಕರು.

Share This Article