ಬೆಂಗಳೂರು: ಕಳೆದ ಮೂರು ದಿನದಿಂದ ತನ್ನ ಸ್ವಗ್ರಾಮಕ್ಕೆ ತೆರಳಲು ಹಣವಿಲ್ಲದೆ ಪರದಾಡುತ್ತಿದ್ದ ವೃದ್ಧರೊಬ್ಬರಿಗೆ ಸಾರ್ವಜನಿಕರು ಊಟ ಉಪಚಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಲೋಹಿತ್ ನಗರದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಪುರ ಗ್ರಾಮದ ನಿವಾಸಿ ಸಂಜೀವಪ್ಪ ಅವರು ಕಳೆದ ಮೂರು ದಿನದ ಹಿಂದೆ ನೆಲಮಂಗಲ ಬಳಿಯ ಯಂಟಗಾನಹಳ್ಳಿ ಗ್ರಾಮಕ್ಕೆ ಕಾಲಿನ ಮೂಳೆ ಮುರಿತ ಚಿಕಿತ್ಸೆಗೆಂದು ಸಂಜೀವಪ್ಪ ಅವರ ಅಣ್ಣನ ಮಗ ನರಸಿಂಹಯ್ಯ ಕರೆತಂದಿದ್ದರು. ಆದರೆ ಚಿಕಿತ್ಸೆ ಕೊಡಿಸದೆ ಇಲ್ಲೆ ಬಿಟ್ಟು ನಾಪತ್ತೆಯಾಗಿದ್ದಾರೆ.
ವೃದ್ಧ ಸಂಜೀವಪ್ಪ ತನ್ನ ಬಳಿ ಬಿಡಿಕಾಸು ಇಲ್ಲದೆ ಊಟ ಹಾಗೂ ವಿಶ್ರಾಂತಿ ಪಡೆಯಲು ಜಾಗವಿಲ್ಲದೆ ಪರದಾಡುತಿದ್ದರು. ತಾತನ ಪರದಾಟವನ್ನ ನೋಡಿದ ಸ್ಥಳೀಯರು ಊಟ ಉಪಚಾರವನ್ನ ನೀಡಿ, ತನ್ನ ಸ್ವಗ್ರಾಮಕ್ಕೆ ತೆರಳಲು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.