ಬೆಂಗಳೂರು: ಕೋವಿಡ್-19 ಲಸಿಕೆ ಅಭಿಯಾನದಲ್ಲಿ ದೇಶದಲ್ಲೇ ಕರ್ನಾಟಕ ಒಳ್ಳೆಯ ಹೆಸರು ಮಾಡಿದೆ. ಲಸಿಕಾ ಅಭಿಯಾನದಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೂ ಹಲವೆಡೆ ಜನರು ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದುಕೊಳ್ಳಿ ಎನ್ನುತ್ತಾ ಮನೆ ಮುಂದೆ ಹೋಗುವ ಅಧಿಕಾರಿಗಳಿಗೆ ಜನರಿಂದ ಕಹಿ ಅನುಭವಗಳಾಗಿವೆ.
Advertisement
ನೆಲಮಂಗಲ ತಾಲ್ಲೂಕಿನ ಗೋವಿಂದಪುರದಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದ ಆರೋಗ್ಯ ಸಿಬ್ಬಂದಿ ಜೊತೆಗೆ ಮಹಿಳೆ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ. ಲಸಿಕೆ ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗೆ, ಒಂದು ತೊಟ್ಟು ವಿಷ ಕೊಟ್ಬಿಡಿ ಆದ್ರೆ ವ್ಯಾಕ್ಸಿನ್ ಮಾತ್ರ ಬೇಡ ಎಂದು ಮಹಿಳೆ ನಿರಾಕರಿಸಿರುವ ಪ್ರಸಂಗ ನಡೆದಿದೆ. ಇದನ್ನೂ ಓದಿ: ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದ ತಜ್ಞರು!
Advertisement
ಅಮ್ಮ ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ. ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ, ನಾಲ್ಕು ದಿನ ಚೆನ್ನಾಗಿರಲಿ ಅಂತ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಮಹಿಳೆ ತಿಳಿಸಿದ್ದಾರೆ. ಅದಕ್ಕೆ ಆರೋಗ್ಯ ಸಿಬ್ಬಂದಿ ಪ್ರತಿಕ್ರಿಯಿಸಿ, ನಾವು ಆರೋಗ್ಯವಾಗಿರಬೇಕು ಎಂದೇ ಲಸಿಕೆ ನೀಡುತ್ತಿರುವುದು ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಮಹಿಳೆ, ಅನ್ನದಲ್ಲಿ ವಿಷ ಹಾಕಿ ಕೊಟ್ಬಿಡಿ, ಆದರೆ ಕೊರೊನಾ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಮಹಿಳೆಗೆ ಲಸಿಕೆ ನೀಡಲು ಸಾಧ್ಯವಾಗದೇ ಆರೋಗ್ಯ ಸಿಬ್ಬಂದಿ ತಂಡ ಬೇರೆ ದಾರಿ ಇಲ್ಲದೇ ವಾಪಸ್ ಆಗಿದೆ. ಇದನ್ನೂ ಓದಿ: ಕೋವಿಡ್ ಮೊದಲ ಡೋಸ್‍ನಲ್ಲಿ 100% ಪ್ರಗತಿ: ಸಚಿವ ಸುಧಾಕರ್