ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದ ರಸ್ತೆಗಾಗಿ ಅಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆ ಘಟನೆ ನಡೆದಿದ್ದ ಸ್ಥಳಕ್ಕೆ, ಪರಿಶೀಲನೆಗೆ ಬಂದ ಅಧಿಕಾರಿಗಳ ಕಾರ್ ಕೆಸರು ರಸ್ತೆಯಲ್ಲಿ ಸಿಲುಕಿಕೊಂಡು ಫಜೀತಿ ಅನುಭವಿಸಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ಸುಸಜ್ಜಿತ ರಸ್ತೆ ಮಾಡುವಂತೆ ವಿನೂತನ ಪ್ರತಿಭಟನೆ ಮಾಡಿದ್ದ ಗ್ರಾಮಸ್ಥರು, ಇದೀಗ ಆ ರಸ್ತೆ ವೀಕ್ಷಿಸಲು ಬಂದ ಅಧಿಕಾರಿಗಳೆ ಕೆಸರಿನಲ್ಲಿ ಕಾಲ ಕಳೆಯುವಂತಾಗಿದೆ. ಮಳೆಯಿಂದಾಗಿ ಕೆಸರು ಗದ್ದೆಯಂತಹ ರಸ್ತೆಯಲ್ಲಿ ಸಿಲುಕಿದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಾರನ್ನು, ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಕಾರು ಎಳೆದು ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ
Advertisement
Advertisement
ಕೆಸರು ರಸ್ತೆಯಲ್ಲಿ ಪೂಜೆ ಮಾಡಿ ಗಿಡ ನೆಟ್ಟು ಪ್ರತಿಭಟನೆ ಮಾಡಿದ್ದ ಜನರು ಇದೀಗ, ಪರಿಶೀಲನೆಗೆ ಬಂದ ಅಧಿಕಾರಿಗಳೇ ಕೆಸರು ಗದ್ದೆಯ ರಸ್ತೆಯಲ್ಲಿ ಸಿಲುಕಿ ಪರದಾಟ ನಡೆಸಿದ್ದಾರೆ. ನೋಡಿ ಸ್ವಾಮಿ ದಿನನಿತ್ಯ ನಮ್ಮ ಸಂಕಷ್ಟ ಎಂದ ಗ್ರಾಮಸ್ಥರು ತಮ್ಮ ನೋವುನ್ನು ಪ್ರಾತ್ಯಕ್ಷಿಕವಾಗಿ ತೋರಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅರೆಸ್ಟ್ – ಎಕೆ47, ಮದ್ದುಗುಂಡುಗಳು ವಶಕ್ಕೆ
Advertisement
ರಸ್ತಗೆ ಡಾಂಬರ್ ಹಾಕಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ನಂತರ ಪ್ರತಿಭಟನೆಯನ್ನು ಮಾಡಿದ್ದರು. ಹಾಳಾಗಿರುವ ರಸ್ತೆಯ ವರದಿ ನೋಡಿ ಗ್ರಾಮಕ್ಕೆ ಬಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಕೆಸರು ರಸ್ತೆಯಲ್ಲಿ ಕಾರು ಸಿಲುಕಿ ಪೇಚಿಗೆ ಸಿಲುಕಿದ ಅಧಿಕಾರಿಗಳು ಗ್ರಾಮಸ್ಥರ ನಗೆಪಾಠಲಿಗೆ ಇಡಾಗಿದ್ದಾರೆ.