ಟೆಲ್ ಅವಿವ್: ಹಮಾಸ್ (Hamas Attack) ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ (Israel) ಸದ್ಯಕ್ಕೆ ಯುದ್ಧ ನಿಲ್ಲಿಸುವ ಮಾತೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಗೆಲ್ಲುವ ವರೆಗೂ ದಾಳಿ ನಡೆಯಲಿದ್ದು ಮೂರು ಹಂತದಲ್ಲಿ ಗಾಜಾ ಟಾರ್ಗೆಟ್ ಮಾಡಲಿದ್ದೇವೆ ಎಂದು ಸುಳಿವು ಕೊಟ್ಟಿದೆ. ಈ ನಡುವೆ ದಾಳಿ-ಪ್ರತಿ ದಾಳಿ ಮುಂದುವರಿದಿದ್ದು, ಗಾಜಾಕ್ಕೆ ಮಾನವೀಯತೆ ನೆರವು ಹರಿದು ಬರುತ್ತಿದೆ.
ಹಮಾಸ್-ಇಸ್ರೇಲ್ (Israel Hamas War) ನಡುವೆ ಯುದ್ಧ ಶುರುವಾಗಿ 14 ದಿನಗಳು ಕಳೆದಿವೆ. ಯುದ್ಧ ನಿಲ್ಲುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ಎಚ್ಚರಿಕೆ ಸಂದೇಶ ರವಾನಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು (Benjamin Netanyahu) ಗೆಲುವಿನ ತನಕ ವಿರಮಿಸುವುದಿಲ್ಲ. ಗೆಲುವಿನ ಕಡೆಯ ಕ್ಷಣದ ವರೆಗೂ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ
Advertisement
Advertisement
ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ. ಗಾಜಾದ (Gaza Strip) ಮೇಲೆ ಬಾಂಬ್ ದಾಳಿ ಮುಂದುವರಿಯಲಿದೆ. ಒತ್ತೆಯಾಳುಗಳನ್ನು ವಾಪಸ್ ಕರೆ ತರುವ ತನಕ ಹೋರಾಟ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement
ಹಮಾಸ್ ವಿರುದ್ಧದ ಇಸ್ರೇಲ್ ಮೂರು ಹಂತಗಳಲ್ಲಿ ಯುದ್ಧ ಮಾಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ತೀವ್ರ ದಾಳಿ ಇರಲಿದ್ದು, ಈಗಾಗಲೇ ಆರಂಭಗೊಂಡಿದೆ. ಎರಡನೇ ಹಂತದಲ್ಲಿ ಕಡಿಮೆ ತೀವ್ರತೆಯಲ್ಲಿ ದಾಳಿ ಇರಲಿದ್ದು, ಕೊನೆಯಲ್ಲಿ ಅವರು ಗಾಜಾ ಸ್ಟ್ರಿಪ್‌ನಲ್ಲಿ ಹೊಸ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ
Advertisement
ಗಾಜಾಪಟ್ಟಿಗೆ ಮಾನವೀನ ನೆರವು ನೀಡಲು ಇಸ್ರೇಲ್ ಅವಕಾಶ ನೀಡಿದ ಬಳಿಕ ವಿಶ್ವಸಂಸ್ಥೆ ನೆರವಿಗೆ ಮುಂದಾಗಿದೆ. ಇಂದು ಈಜಿಪ್ಟ್‌ನ ರಾಫಾ ಗಡಿ ಮೂಲಕ ಎರಡು ಟ್ರಕ್ ಗಾಜಾ ತಲುಪಿದ್ದು, ಜನರಿಗೆ ಅಗತ್ಯ ನೆರವು ನೀಡಲಾಗುತ್ತಿದೆ.
ಇದರ ನಡುವೆ ಪ್ಯಾಲೆಸ್ತೇನಿ ಜನರಿಗೆ ಆಶ್ರಯ ನೀಡಲು ನೆರೆಯ ದೇಶಗಳು ನಿರಾಕರಿಸುತ್ತಿವೆ. ಯುದ್ಧ ಹಮಾಸ್ ವಿರುದ್ಧ ಆಗಿರಬೇಕು. ಪ್ಯಾಲೆಸ್ತೇನಿಯರನ್ನು ಹೊರಗೆ ತಳ್ಳುವ ಪ್ರಯತ್ನ ಆಗಬಾರದು. ಅವರು ಅವರ ನೆಲದಲ್ಲಿದ್ದಾರೆ. ಈಗಾಗಲೇ ನಾವು ಬಹಳಷ್ಟು ಜನರಿಗೆ ಆಶ್ರಯ ನೀಡಿದ್ದೇವೆ. ಇನ್ನೂ ಆಶ್ರಯ ನೀಡಲು ಸಾಧ್ಯವಿಲ್ಲ. ಇಸ್ರೇಲ್ ಜನರನ್ನು ಹೊರದಬ್ಬುವ ಪ್ರಯತ್ನ ಮಾಡಬಾರದು ಎಂದು ಜೊರ್ಡಾನ್, ಈಜಿಪ್ಟ್, ಸಿರಿಯಾ ದೇಶಗಳ ಮುಖ್ಯಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ
ದಾಳಿಗಳು ಮುಂದುವರಿದಿದ್ದು ಈವರೆಗೂ 4,137 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 13,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದಿಂದ ಮಾಹಿತಿ ನೀಡಿದೆ. ಈ ನಡುವೆ ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಕ್ರಮಣದ ಸಮಯದಲ್ಲಿ 203 ಜನರನ್ನು ಹಮಾಸ್ ಒತ್ತೆಯಾಳಗಿರಿಸಿಕೊಂಡಿದೆ.
Web Stories