ಬೆಂಗಳೂರು: ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಜವಾಹರಲಾಲ್ ನೆಹರು ಸಿಎಎ ಪರವಾದ ನಿಲುವು ಹೊಂದಿದ್ದರು. ಈ ಬಗ್ಗೆ ಮನಮೋಹನ್ ಸಿಂಗ್ ಮಾತನಾಡಿದ್ರು ಈ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅವಶ್ಯಕತೆಯಿದೆ. ಇವರು ಕಾಯ್ದೆ ಜಾರಿ ಮಾಡಿರೋದರಿಂದ ಇಷ್ಟೊಂದು ಮಹತ್ವ ಬಂದಿದೆ ಎಂದು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಇಂದು ಬಿಜೆಪಿ ಹಮ್ಮಿಕೊಂಡಿದ್ದ ಸಿಎಎ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಪಾಲ್ಗೊಂಡಿದ್ದರು. ಕತ್ರಿಗುಪ್ಪೆಯ ಕಂಬಾರರ ನಿವಾಸಕ್ಕೆ ಭೇಟಿ ನೀಡಿ, ಸಿಎಎ ಕಾಯ್ದೆ ಬಗ್ಗೆ ಹೇಳಿದರು. ಇದನ್ನ ರಾಜಕೀಯಕ್ಕೋಸ್ಕರ ಕೆಲವರು ವಿರೋಧಿಸುತ್ತಿದ್ದಾರೆ. ಇಂತಹ ಕಾಯ್ದೆಯ ಬಗ್ಗೆ ಮನೆ ಮನೆಗೆ ತಿಳಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.
Advertisement
ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಕಂಬಾರರು ಕೌಶಲ್ಯಾಭಿವೃದ್ಧಿಗಾಗಿ ವಿಶ್ವಕರ್ಮಿ ವಿದ್ಯಾಲಯವನ್ನು ಪ್ರಾರಂಭಿಸುವ ಬಗ್ಗೆ ಸಲಹೆ ನೀಡಿದರು.
ಕೌಶಲ್ಯಾಭಿವೃದ್ಧಿಯಿಂದ ಹಲವು ಉದ್ಯೋಗ ಸೃಷ್ಟಿಸಲು ನೆರವಾಗಲಿದೆ ಎಂಬ ವಿಚಾರವನ್ನು ನಮ್ಮ ಸರ್ಕಾರ ಗಮನದಲ್ಲಿರಿಸಿ ಈ ಕುರಿತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.#CAAJanJagran pic.twitter.com/Qk183XHPNK
— Dr. Ashwathnarayan C. N. (@drashwathcn) January 5, 2020
Advertisement
ಕಂಬಾರರ ಮನೆಯಷ್ಟೇ ಅಲ್ಲದೇ, ನಟಿ ಗಿರಿಜಾ ಲೋಕೇಶ್, ಪ್ರದೇಶ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಸೇರಿದಂತೆ ಹತ್ತಾರು ಮನೆಗಳಿಗೆ ತೆರಳಿ, ಸಿಎಎ ಕಾಯ್ದೆ ಜಾರಿಯ ಬಗ್ಗೆ ಹೇಳಿದರು.
Advertisement