ಕನ್ನಡದ ‘ಮುಂಗಾರು ಮಳೆ 2’ ಬೆಡಗಿ ನೇಹಾ ಶೆಟ್ಟಿ (Neha Shetty) ತೆಲುಗು (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಲು ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ
ಶ್ರೀಲೀಲಾ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿ ಗೆದ್ಮೇಲೆ ನೇಹಾ ಶೆಟ್ಟಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲು ಓಕೆ ಎಂದಿದ್ದಾರಂತೆ. ಪವನ್ ಕಲ್ಯಾಣ್ ನಟನೆಯ OG ಸಿನಿಮಾವು ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದೀಗ ಚಿತ್ರದ ಕೆಲಸ ಶುರುವಾಗಿದ್ದು, ಈ ಸಿನಿಮಾದ ಭಾಗವಾಗಲು ಚಿತ್ರತಂಡ ನಟಿಯನ್ನು ಕೇಳಿದೆಯಂತೆ. ನೇಹಾ ಕೂಡ ಸೊಂಟ ಬಳುಕಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ವಿಚಾರ.
ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ (Pawan Kalyan) ಜೊತೆ ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗಲಿದೆ.